Belagavi NewsBelgaum NewsKannada NewsKarnataka NewsLatest

*ಬೆಳಗಾವಿ ಪೊಲೀಸ್ ವಿಭಾಗದಲ್ಲಿ ಡಿಜಿಟಲ್ ವ್ಯವಸ್ಥೆ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರ ಪೊಲೀಸ್‌ ಕಮಿಷನರೇಟ್‌ನ ಅನಲಾಗ್ ನಿಸ್ತಂತು ಸಂಪರ್ಕಜಾಲವನ್ನು ಡಿಜಿಟಲ್ ನಿಸ್ತಂತು ಸಂಪರ್ಕಜಾಲಕ್ಕೆ ಬದಲಾಯಿಸಲಾಗಿದೆ.

ಬೆಳಗಾವಿ ನಗರ ಪೊಲೀಸ್‌ ಕಮಿಷನರೇಟ್‌ ಘಟಕದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಅನಲಾಗ್‌ ನಿಸ್ತಂತು ಸಂಪರ್ಕಜಾಲವನ್ನು ಡಿಜಿಟಲ್ ನಿಸ್ತಂತು ಸಂಪರ್ಕ ಜಾಲಕ್ಕೆ ಬದಲಾಯಿಸಿದ್ದು, ನಗರ ವ್ಯಾಪ್ತಿಯಲ್ಲಿ ಬೇರೆ ಬೇರೆ ಎತ್ತರದ ಪ್ರದೇಶಗಳಲ್ಲಿ ಒಟ್ಟು ೦೫ ನಿಸ್ತಂತು ಮರುಪ್ರಸರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಇದರಿಂದ ನಗರದ ಪೊಲೀಸ್‌ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಯಾವುದೇ ತುರ್ತು ಸಂದರ್ಭಗಳಲ್ಲಿ ಯಾವುದೇ ಅಡೆತಡೆ ಇಲ್ಲದೇ ಸಂವಹನ ನಡೆಸಲು ಅನುಕೂಲವಾಗುತ್ತದೆ. ಬೆಳಗಾವಿ ನಗರಕ್ಕೆ ಒಟ್ಟು ೩೫ ಸ್ಟಾö್ಯಟಿಕ್‌ಗಳು, ೧೮೦ ಮೊಬೈಲ್ ಸೆಟ್‌ಗಳು, ೦೮ ರಿಪೀಟರ್‌ಗಳು ಹಾಗೂ ೫೬೩ ವಾಕಿಟಾಕಿಗಳು ಹಂಚಿಕೆಯಾಗಿದ್ದು, ಈ ಎಲ್ಲ ಉಪಕರಣಗಳ ಸಹಾಯದಿಂದ ಬೆಳಗಾವಿ ನಗರದಲ್ಲಿ ಡಿಜಿಟಲ್ ನಿಸ್ತಂತು ಸಂಪರ್ಕವನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.


Home add -Advt

Related Articles

Back to top button