*ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಜಾರಕಿಹೊಳಿ ಹಾಗೂ ಸವದಿ ಬಣದಿಂದ ಮೀಟಿಂಗ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದು ನಡೆಯಲಿರುವ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಚುನಾವಣೆಗೂ ಮೊದಲು ಎರಡು ಬಣದಿಂದ ಸಭೆ ನಡೆಸಲಾಗುತ್ತಿದೆ.
ಶಾಸಕ ಲಕ್ಷ್ಮಣ ಸವದಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ನೇತೃತ್ವದ ಬಣದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕರಾದ ಮಲ್ಲಣ್ಣ ಯಾದವಾಡ, ಶಾಸಕ ರಾಜು ಕಾಗೆ ಸೇರಿದಂತೆ ಅನೇಕರು, ಬೆಳಗಾವಿಯ ಸದಾಶಿವ ನಗರದಲ್ಲಿ ಇರುವ ಶಾಸಕ ಲಕ್ಷ್ಮಣ ಸವದಿ ಮನೆಯಲ್ಲಿ ಗುಪ್ತವಾಗಿ ಚರ್ಚೆ ನಡೆಸಿತ್ತಿದ್ದಾರೆ.
ಇನ್ನೂ ಜಾರಕಿಹೊಳಿ ಬ್ರದರ್ಸ್ ಬಣದ ಗುರುತಿಸಿಕೊಂಡಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಿಲಕಂಠ ಕಪ್ಪಲಗುದ್ದಿ, ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ, ವಿರುಪಾಕ್ಷ ಮಾಮನಿ, ಶಾಸಕ ವಿಶ್ವಾಸ ವೈದ್ಯ, ನಾನಾಸಾಹೇಬ ಪಾಟೀಲ್, ಅಪ್ಪಾಸಾಹೇಬ ಕುಲಗೂಡೆ ಸೇರಿದಂತೆ ಅನೇಕರು ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಈಗಾಗಲೇ ಅನೇಕರು ಲಾಭಿ ನಡೆಸಿದ್ದು, ಜಾರಕಿಹೊಳಿ ಬಣಕ್ಕೆ ಸ್ಪಷ್ಟ ಬಹುಮತ ಇದೆ. ಆದರೆ ಇತ್ತ ಸವದ ಬಣದಿಂದಲೂ ಪ್ಲಾನ್ ನಡೆದಿದ್ದು,ಅಂತಿಮವಾಗಿ ಯಾವ ಬಣದ ಅಭ್ಯರ್ಥಿ ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಾರೆ ಎಂದು ಕಾದು ನೋಡಬೇಕು.




