Belagavi NewsBelgaum NewsKannada NewsLatest

*ಕೃತಕ ಬುದ್ಧಿಮತ್ತೆ ಯುಗದಲ್ಲಿ ಭಾಷೆ ಮತ್ತು ಸಾಹಿತ್ಯ ಸವಾಲುಗಳನ್ನುಎದುರಿಸುತ್ತಿವೆ : ಮಹಾಂತೇಶ ಕವಟಗಿಮಠ*

ಪ್ರಗತಿವಾಹಿನಿ ಸುದ್ದಿ: ಕೃತಕ ಬುದ್ಧಿಮತ್ತೆ ಸಾಹಿತ್ಯವನ್ನು ಸೃಷ್ಟಿಸುವ ಸಾಧನವಾಗಿದೆ ಆದರೆ ಸೃಜನಶೀಲ ಸಾಹಿತ್ಯದ ಮೂಲಕ ಭಾವನೆಗಳನ್ನು ವ್ಯಕ್ತ ಪಡಿಸಲು ಭಾಷೆ ಮತ್ತು ಸಾಹಿತ್ಯವೇ ಮೂಲವಾಗಿವೆ ಎಂದು ಕೆ ಎಲ್‌ ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ನುಡಿದರು.


ಅವರು ಸೋಮವಾರ ನಗರದ ಕೆ ಎಲ್‌ ಇ ಸಂಸ್ಥೆ ಲಿಂಗರಾಜ ಮಹಾವಿದ್ಯಾಲಯದ ಭಾಷಾ ವಿಭಾಗಗಳು ಆಯೋಜಿಸಿದ್ದ ಭವಿಷ್ಯದ ಪ್ರತಿಧ್ವನಿಗಳು ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಾಹಿತ್ಯ ಎಂಬ ವಿಷಯದ ಕುರಿತು ಆಯೋಜಿಸದ್ದ ಸಾಹಿತ್ಯ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.


ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಾಹಿತ್ಯ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಮಾತೃಭಾಷೆ ವ್ಯಕ್ತಿಯ ವ್ಯಕ್ತಿತ್ವ ರೂಪಿಸಲು ಮಹತ್ವದ ಪಾತ್ರ ನಿರ್ವಹಿಸುತ್ತದೆ ಮಾತೃಭಾಷೆಯಲ್ಲಿ ಪ್ರಭುತ್ವ ಹೊಂದಿದವರು ವಿಶ್ವವನ್ನೇ ಜಯಿಸಬಲ್ಲರು. ಕೃತಕ ಬುದ್ಧಿಮತ್ತೆ ಯುಗದಲ್ಲಿ ವಿದ್ಯಾರ್ಥಿಗಳು ಭಾಷಾ ಪ್ರಭುತ್ವ ಪಡೆದು ಯಶಸ್ವಿಯಾಗಬೇಕು. ಕೃತಕ ಬುದ್ಧಿಮತ್ತೆಯನ್ನು ಮಾನವನ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ ಸಾಧನ ಮಾತ್ರ ಅದು ಮನುಷ್ಯನ ಆಂತರಿಕ ಭಾವನೆಗಳನ್ನು ತೋರ್ಪಡಿಸಲು ಸೃಜನಶೀಲ ಭಾಷೆಯನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು. ಕೃತಕ ಬುದ್ಧಿಮತ್ತೆಯನ್ನು ಮಾನವನ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಭಾರತದಲ್ಲಿ ಅತಿದೊಡ್ಡ ಮಾನವ ಸಂಪನ್ಮೂಲವಿದೇ ಆ ಅತಿದೊಡ್ಡ ಮಾನವ ಸಂಪನ್ಮೂಲದ ಕಲ್ಯಾಣಕ್ಕಾಗಿ ಕೃತಕ ಬುದ್ಧಿಮತ್ತೆ ಬಳಕೆಯಾಗಬೇಕು ಆ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸಬೇಕು ಎಂದು ತಿಳಿಸಿದರು.


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಸಿ ಬಾಲಕೃಷ್ಣ ಅವರು ಕೃತಕ ಬುದ್ಧಿಮತ್ತೆ ಮಾನವನ ಕಲ್ಪನಾ ಶಕ್ತಿಯನ್ನು ನಾಶಗೊಳಿಸುವ ದೊಡ್ಡ ಸಾಧನವಾಗಿದೆ. ಕೃತಕ ಬುದ್ಧಿಮತ್ತೆಯನ್ನು ಸರಿಯಾಗಿ ಉಪಯೋಗಿಸಬೇಕು. ಮಾನವನ ಅಭಿವೃದ್ಧಿಗೆ ಕೃತಕ ಬುದ್ಧಿಮತ್ತೆ ಬಳಕೆಯಾಗಬೇಕು. ಕೃತಕ ಬುದ್ಧಿಮತ್ತೆ ಪದಗಳನ್ನು ಸೃಷ್ಟಿಸಬಹುದು ಭಾವನೆಗಳನ್ನು ವಿಶ್ಲೇಷಿಸಬಹುದು ಹೊರತು ಭಾವನೆಗಳನಲ್ಲ ಸೃಷ್ಟಿಸಲು ಸಾದ್ಯವಿಲ್ಲ. ಈ ಭಾವನೆಗಳನ್ನು ಪರಿಣಾಮಕಾರಿಯಾಗಿ ಬಳಸಲು ಕೃತಕ ಬುದ್ಧಿಮತ್ತೆಯನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಮಾತನಾಡಿದರು.

Home add -Advt


ಸಾಹಿತ್ಯವೆಂಬುದು ಶಬ್ದ ಭಾಷೆಗಳ ಗುಚ್ಚವಲ್ಲ ಅದು ಭಾವನೆಗಳನ್ನು ಒಳಗೊಂಡಿರುವ ಮಾನವನ ಅಧ್ಭುತ ಸೃಷ್ಠಿ ಕಲ್ಪನೆಯ ಮೂಲಕ ಸೃಜನಶೀಲ ಸಾಹಿತ್ಯ ಸೃಷ್ಠಿಸಬಹುದು ಎಂದು ನುಡಿದರು.


ಕಾರ್ಯಕ್ರಮದ ವಿವಿಧ ಘೋಷ್ಟಿಗಳಲ್ಲಿ ಶಿವಾಜಿಯ ವಿಶ್ವವಿದ್ಯಾಲಯದ ನಿವೃತ್ತ ಹಿಂದಿ ಪ್ರಾಧ್ಯಾಪಕ ಡಾ ಅಶೋಕ ಚೌಹಾನ್‌, ವಿಜಯವಾಣಿ ಕನ್ನಡ ದಿನಪತ್ರಿಕೆಯ ಬೆಳಗಾವಿಯ ಸ್ಥಾನಿಕ ಸಂಪಾದಕ ಮಹೇಶ ವಿಜಾಪುರ ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ ಹನಮಂತ ಮೇಲಿನಮನಿ ವಹಿಸಿದ್ದರು. ಕುಮಾರಿ ರೋಹಿಣಿ ಹಣಬರಟ್ಟಿ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ ಎಚ್.ಎಮ್‌.ಚನ್ನಪ್ಪಗೋಳ ಸ್ವಾಗತಿಸಿದರು. ಡಾ. ನಂದನ ಕಟಾಂಬಳೆ ಅತಿಥಿಗಳನ್ನು ಪರಿಚಯಿಸಿದರು. ಡಾ.ಶಶಿಕಾಂತ ಕೊಣ್ಣೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರಧ್ಧಾ ಜೋಶಿ ವಂದಿಸಿದರು.


ಕಾರ್ಯಕ್ರಮದಲ್ಲಿ 25 ಮಹಾವಿದ್ಯಾಲಯಗಳ 450 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಿರಿಯ ಪ್ರಾಧ್ಯಾಪಕ ಡಾ.ಜಿ.ಎನ್.ಶೀಲಿ, ಡಾ.ಸಿ ರಾಮಾ ರಾವ್ ಹಾಗೂ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

Back to top button