Belagavi NewsBelgaum NewsKannada NewsKarnataka NewsLatest

*ಐಷಾರಾಮಿ ಜೀವನಕ್ಕಾಗಿ ಕಳ್ಳತನ: ಖತರ್ನಾಕ್ ಕಳ್ಳ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಐಷಾರಾಮಿ ಜೀವನ ನಡೆಸಲು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಖತರ್ನಾಕ್ ಕಳ್ಳನನ್ನು ಬೆಳಗಾವಿಯ ಯಮಕನಮರಡಿ ಫೋಲಿಸರು ಬಂಧಿಸಿದ್ದಾರೆ.

ಬೆಳಗಾವಿಯ ಮಹಾತೇಂಶ ನಗರದ ಸುರೇಶ ಮಾರುತಿ ನಾಯಿಕ  (37) ಬಂಧಿತ ಆರೋಪಿ. ಯಮಕನಮರಡಿ ವ್ಯಾಪ್ತಿಯಲ್ಲಿರುವ ಮನೆಯ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿದ  ಪ್ರಕರಣ ದಾಖಲಾಗಿತ್ತು. ಕಳ್ಳತನ ಪ್ರಕರಣದ ದ ಆರೋಪಿ ಪತ್ತೆಗಾಗಿ ಬಲೆ ಬೀಸಿದ ಯಮಕನಮರಡಿ ಪೊಲೀಸರು ಆರೋಪಿ ಬಂಧಿಸಿ,  ಆತನಿಂದ 97 ಲಕ್ಷಕ್ಕೂ ಅಧಿಕ ಮೌಲ್ಯದ  ಚಿನ್ನಾಭರಣದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಅ.16  ರಂದು  ಅ. 22 ರಂದು  ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಮನೆಗೆ ನುಗ್ಗಿ  ಕಳ್ಳತನ ಮಾಡಿ ಪರಾರಿಯಾಗಿದ್ದ. ಕುಖ್ಯಾತ ಆರೋಪಿಯನ್ನು ಯಮಕನಮರಡಿ ಪೊಲೀಸರು ಬಂಧಿಸಿ ಆತನಿಂದ ಸತ್ಯ ಬಾಯ್ಬಿಡಿಸಿದ್ದಾರೆ. ಆರೋಪಿಯನ್ನು ಬಂಧಿಸಿದಾಗ ತಪ್ಪೋಪಿಕೊಂಡಿದ್ದಾನೆ.  

ಬಂಧಿತನಿಂದ 1280 ಗ್ರಾಂ.  ಚಿನ್ನಾಭರಣ, 8 1/2 ಕೆ.ಜಿ. ಬೆಳ್ಳಿ , 1,25 ಲಕ್ಷ ರೂ. ನಗದು   1 ಥಾರ್ ವಾಹನ, 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.  

Home add -Advt

ಯಮಕನಮರಡಿಯಲ್ಲಿ ಅ.22ರಂದು  ಕಳ್ಳತನವಾದ 70 ಗ್ರಾಂ. ಚಿನ್ನಾಬಂಗಾರ, 170 ಗ್ರಾಂ ಬೆಳ್ಳಿ ಮತ್ತು  22 ಸಾವಿರ ರೂ. ನಗದು , ಮನಗುತ್ತಿಯಲ್ಲಿ ಕಳ್ಳತನ ಮಾಡಿದ್ದ  ಚಿನ್ನಾಭರಣವನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ.   

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿ, ಬಹುಮಾನವನ್ನು ಘೋಷಿಸಿದ್ದಾರೆ. 

Related Articles

Back to top button