*ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಕೆಎಲ್‌ಎಸ್ ಜಿಐಟಿ ಸಾಧನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಟಿಯು ರಾಜ್ಯಮಟ್ಟದ ಬೆಸ್ಟ್ ಫಿಜಿಕ್, ವೆಟ್‌ಲಿಫ್ಟಿಂಗ್ ಮತ್ತು ಕುಸ್ತಿ ಚಾಂಪಿಯನ್‌ಶಿಪ್‌ಗಳಲ್ಲಿ ಕೆಎಲ್‌ಎಸ್ ಗೊಗಟೆ ತಾಂತ್ರಿಕ ಮಹಾವಿದ್ಯಾಲಯ ಅತ್ಯುತ್ತಮ ಸಾಧನೆ ಮಾಡಿದೆ.
ಬೆಂಗಳೂರು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ನಡೆದ ಸ್ಫರ್ಧೆಗಳಲ್ಲಿ ಬೆಸ್ಟ್ ಫಿಜಿಕ್ ವಿಭಾಗದಲ್ಲಿ ಓಂ ಪಾಟೀಲ ಮತ್ತು ಶೀಲ್ ಬೆಳ್ಳಿ ಪದಕ ಗಳಿಸಿದರು. ಶ್ರೇಯಾ ಕಂಚಿನ ಪದಕವನ್ನು ಗೆದ್ದರು. ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶಿವರಾಜ್ ಕೊಂಡುಸ್ಕರ್ ಕಂಚಿನ ಪದಕವನ್ನು ಪಡೆದುಕೊಂಡರು. ಕುಸ್ತಿ ವಿಭಾಗದಲ್ಲಿ ಭುವೇಶ್ವರಿ ಬೆಳ್ಳಿ ಪದಕವನ್ನು ಗೆದ್ದು ಸಂಸ್ಥೆಗೆ ಕೀರ್ತಿ ತಂದರು.
ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾವ್ಕರ್, ಸದಸ್ಯರಾದ ಆರ್. ಎಸ್. ಮುತಾಲಿಕ್ ಮತ್ತು ಎಸ್. ವಿ. ಗಣಾಚಾರಿ, ಪ್ರಾಚಾರ್ಯ ಡಾ. ಎಂ. ಎಸ್. ಪಾಟೀಲ ಮತ್ತು ಪ್ರೊ. ದಿಗಂಬರ ಕುಲಕರ್ಣಿ ಅವರು ಎಲ್ಲಾ ವಿಜೇತರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದರು.
ವಿದ್ಯಾರ್ಥಿಗಳಿಗೆ ಡಾ. ಜಾರ್ಜ್ ರೋಡ್ರಿಗ್ಸ್ (ದೈಹಿಕ ಶಿಕ್ಷಣ ನಿರ್ದೇಶಕರು) ಹಾಗೂ ದೈಹಿಕ ಶಿಕ್ಷಕರು ಶುಭಸ್ವ ಶಿಖರೆ, ಶಿವಾನಿ ಕರಾಳೆ ಮತ್ತು ನಿಕಿತಾ ಪಾಟೀಲ ಮಾರ್ಗದರ್ಶನ ನೀಡಿದ್ದರು.


