*ಬೆಳಗಾವಿ ಉತ್ತರ ವಲಯ ಮಟ್ಟದ ಗೃಹ ರಕ್ಷಕರ ವಾರ್ಷಿಕ ವೃತ್ತಿಪರ ಮತ್ತು ಕ್ರೀಡಾ ಕೂಟ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2025ನೇ ಸಾಲಿನ ಬೆಳಗಾವಿ ಉತ್ತರ ವಲಯ ಮಟ್ಟದ ಗೃಹ ರಕ್ಷಕರ ವಾರ್ಷಿಕ ವೃತ್ತಿಪರ & ಕ್ರೀಡಾಕೂಟವು ನ. 11 ರಿಂದ ನ.13 ರವರೆಗೆ ಜಿಲ್ಲೆಯ ಪೊಲೀಸ್ ಪರೇಡ್ ಮೈದಾನದಲ್ಲಿ ಜರುಗಿದವು.
ಜಿಲ್ಲೆಯ ಪೊಲೀಸ್ ಪರೇಡ್ ಮೈದಾನದಲ್ಲಿ ಜರುಗಿದ ಉದ್ಘಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾ ಶಂಕರ ಗುಳೇದ ಅವರು ಕ್ರೀಡಾ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ, ನಿಷ್ಕಾಮ ಸೇವಾ ತತ್ವದಡಿಯಲ್ಲಿ ಜಿಲ್ಲೆಯ ಗೃಹರಕ್ಷಕರು ಪೊಲೀಸ್ ಇಲಾಖೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಉತ್ತಮ ಕೆಲಸ ನಿರ್ವಹಿಸುತ್ತಿರುವ ಗೃಹರಕ್ಷಕರು ಆರೋಗ್ಯದಿಂದರಲು ಕ್ರೀಡೆಗಳು ಬಹು ಮುಖ್ಯವಾಗಿರುವುದಾಗಿ ಎಂದು ತಿಳಿಸಿದರು. ವಲಯ ಮಟ್ಟದ ಕ್ರೀಡಾ-ಕೂಟಕ್ಕೆ ವೈಯಕ್ತಿಕವಾಗಿ ರೂ.25,000/- ಗಳ ಸಹಾಯಧನ ಮೊತ್ತವನ್ನು ಜಿಲ್ಲಾ ಸಮಾದೇಷ್ಟರಿಗೆ ನೀಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದರು.
ಸದರಿ ವಲಯ ಮಟ್ಟದ ಕ್ರೀಡಾ ಕೂಟದ ಮುಕ್ತಾಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರ ಪೊಲೀಸ್ ಆಯುಕ್ತ ಬೋರಸಿ ಭೂಷಣ್ ಗುಲಾಬರಾವ, ಅವರು ವಲಯ ಮಟ್ಟದಲ್ಲಿ ವಿಜೇತರಾದ ಗೃಹರಕ್ಷಕರಿಗೆ ಬಹುಮಾನ ವಿತರಿಸಿ, ಗೃಹರಕ್ಷಕರು ಸಮಾಜದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಉತ್ತಮ ಕೆಲಸಗಳನ್ನು ನಿರ್ವಹಿಸುತ್ತಿದ್ದು ಎಲ್ಲರು ಪ್ರಶಂಸೆಗೆ ಪಾತ್ರರಾಗಿರುತ್ತಾರೆ. ಗೃಹರಕ್ಷಕರಿಗೆ ಹೆಚ್ಚಿನ ಸೌಲಭ್ಯಗಳು ದೊರೆಯುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಘನ ಅಧ್ಯಕ್ಷತೆಯನ್ನು ವಹಿಸಿದಂತಹ ಬೆಳಗಾವಿ ಗೃಹರಕ್ಷಕದಳದ ಕಮಾಂಡೆಂಟ ಚನ್ನಪ್ಪ ಎಸ್. ಅಥಣಿ. ಜಿಲ್ಲೆಯ ಉಪ ಸಮಾದೇಷ್ಟರಾದ ಬಾಬಾಸಾಹೇಬ ಎಸ್. ಕಾಂಬಳೆ, ಜೆ.ಹೆಚ್. ದೊಡಮನಿ, ನಿವೃತ್ತ ಉಪ ಸಮಾದೇಷ್ಟರಾದ ಚಂದ್ರಶೇಖರ ಭಡಕಲ್ & ರಾಜು ಖಾಸಬಾಗ, ಸಿಬ್ಬಂದಿಗಳಾದ ರವೀಂದ್ರ ಮಾಳಗಿ, ಅಹ್ಮದ ಸಾಹುಕಾರ, ಕಿರಣ ಕಟಗಿ, ಆನಂದ ನಾವಲಗಿ, ಲಕ್ಷ್ಮೀ ಜಂಗನವರ, ಭಾಗ್ಯಶ್ರೀ ರುಮೋಜಿ, ಬಸವರಾಜ ಹಗೇದಾಳ ಸೇರಿದಂತೆ ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳು ಮತ್ತು ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಮತ್ತು ವಿಜಯಪುರ ಜಿಲ್ಲೆಯ ಗೃಹರಕ್ಷಕರು ಹಾಜರಿದ್ದರು.




