Belagavi NewsBelgaum NewsEducationGamesKannada NewsKarnataka NewsTechWorld

*ರನ್ನರ್-ಅಪ್ ಸ್ಥಾನ ಪಡೆದ ಕೆಎಲ್‌ಜಿಐಟಿ ವಿದ್ಯಾರ್ಥಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್‌ಎಸ್ ಗೊಗಟೆ ತಾಂತ್ರಿಕ ಸಂಸ್ಥೆಯ (ಜಿಐಟಿ) ತಂಡವು ಐಇಇಇ ಬೆಂಗಳೂರು ವಿಭಾಗದ ಆಶ್ರಯದಲ್ಲಿ ಮತ್ತು ಆಚಾರ್ಯ ತಾಂತ್ರಿಕ ಸಂಸ್ಥೆಯಲ್ಲಿ ಆಯೋಜಿಸಲಾದ ಅನ್ವೇಷಣ-2025 ರಾಜ್ಯಮಟ್ಟದ ಬಹು-ವಿಭಾಗ ಹ್ಯಾಕಥಾನ್‌ನಲ್ಲಿ ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿದೆ.

ಈ ಸ್ಪರ್ಧೆಯಲ್ಲಿ 180ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಅಂತಿಮ ಸುತ್ತಿಗೆ 40 ತಂಡಗಳು ಆಯ್ಕೆಯಾದವು. ಅಂತಿಮವಾಗಿ ಜಿಐಟಿ ತಂಡ ರನ್ನರ್ಸ್ ಅಪ್ ಪಡೆಯುವಲ್ಲಿ ಯಶಸ್ವಿಯಾಯಿತು. ತಂಡದ ಸದಸ್ಯರು : ಅಥರ್ವ ನಾಯ್ಕ್, ಸಾಹಿಲ್ ಪಾಟೀಲ, ನಿಖಿಲ್ ಮಜುಕರ ಮತ್ತು ಅಥರ್ವ ಕುಲಕರ್ಣಿ.

ವಿದ್ಯಾರ್ಥಿಗಳು ತಮ್ಮ ಯಶಸ್ಸಿಗೆ ಮಾರ್ಗದರ್ಶನ ನೀಡಿದ ಡಾ. ಕುಲದೀಪ್ ಸಂಬ್ರೇಕರ್ (ವಿಭಾಗಾಧ್ಯಕ್ಷ, CSE-AI&ML), ಪ್ರಾಚಾರ್ಯ ಡಾ. ಎಂ. ಎಸ್. ಪಾಟೀಲ, ಪ್ರೊ. ಅಭಿಷೇಕ್ ದೇಶಮುಖ್ (IEEE ಶಾಖಾ ಸಲಹೆಗಾರ), ಡಾ. ಸಂಜೀವ ಎಸ್. ಸನ್ನಕಿ (ವಿಭಾಗಾಧ್ಯಕ್ಷ, CSE), ಪ್ರೊ. ರಾಕೇಶ್ ಜೆ. ಕಡಕೋಲ್ (ವಿಭಾಗಾಧ್ಯಕ್ಷ, ISE) ಮತ್ತು ಜಿಐಟಿ ಸಂಸ್ಥೆಗೆ ಸಹಾಯಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು.

Home add -Advt

Related Articles

Back to top button