
ಪ್ರಗತಿವಾಹಿನಿ ಸುದ್ದಿ: ಬಿಬಿಎಂ ವಿದ್ಯಾರ್ಥಿನಿಯೋರ್ವಳನ್ನು ಯುವಕನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
ದೇವಿಶ್ರೀ (21) ಕೊಲೆಯಾದ ವಿದ್ಯಾರ್ಥಿನಿ. ಪ್ರೇಮ್ ವರ್ಧನ್ ವಿದ್ಯಾರ್ಥಿನಿಯನ್ನು ಹತ್ಯೆಗೈದು ಎಸ್ಕೇಪ್ ಆಗಿರುವ ಆರೋಪಿ. ವಿದ್ಯಾರ್ಥಿನಿಯನ್ನು ತನ್ನ ಸ್ನೇಹಿತನ ರೂಮಿಗೆ ಕರೆದೊಯ್ದಿದ್ದ ಪ್ರೇಮ್ ವರ್ಧನ್ , ಆಕೆಯನ್ನು ಏಕಾಏಕಿ ಕೊಲೆಗೈದು ಎಸ್ಕೇಪ್ ಆಗಿದ್ದಾನೆ.
ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತ ದೇವಿಶ್ರೀ ಆಂಧ್ರ ಮೂಲದವಳಾಗಿದ್ದು, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



