*ನ.25 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ವಾರ್ಷಿಕ ಘಟಿಕೋತ್ಸವ: ಕುಲಪತಿ ಸಿ.ಎಂ.ತ್ಯಾಗರಾಜ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ವಾರ್ಷಿಕ ಘಟಕೋತ್ಸವವು ನವೆಂಬರ್ 25 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಂಜಾನೆ 11:30 ಗಂಟೆಗೆ ಜರುಗಲಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಸಿ.ಎಂ.ತ್ಯಾಗರಾಜ್ ಅವರು ತಿಳಿಸಿದರು.
ನಗರದ ವಾರ್ತಾ ಭವನದಲ್ಲಿ ಸೋಮವಾರ (ನ.24) ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ವಾರ್ಷಿಕ ಘಟಕೋತ್ಸವದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಘಟಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲರದ ಥಾವರ್ಚಂದ ಗೆಹೋಟ್ ಅವರು ವಹಿಸಲಿದ್ದು, ರಾಜ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಸಮಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಹಿರಿಯ ಇಂಗ್ಲೀಷ್ ಪ್ರಾಧ್ಯಾಪಕರು, ಪದ್ಮಶ್ರೀ ಪುರಸ್ಕೃತ ಎ. ಎಸ್. ಕಿರಣಕುಮಾರ್ (ಮಾಜಿ ಅಧ್ಯಕ್ಷರು, ಇಸ್ರೋ ಹಾಗೂ ಜಿ. ಎಮ್. ಮೋದಿ ವಿಜ್ಞಾನ ಪ್ರಶಸ್ತಿ ಪುರಸ್ಕೃತರು) ಅವರು ಘಟಕೋತ್ಸವದ ಭಾಷಣ ಮಾಡುವರು ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವರು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತ ಜ್ಞಾನಮುಖಿ, ಸಮಾಜಮುಖಿ, ಉದ್ಯೋಗಮುಖಿ ಚಿಂತನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದರೊಂದಿಗೆ ಶೈಕ್ಷಣಿಕವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿದೆ. ಹಿರೇಬಾಗೆವಾಡಿಯಲ್ಲಿ 126 ಎಕರೆ ಪ್ರದೇಶದಲ್ಲಿ ಆಡಳಿತ ಕಟ್ಟಡಗಳು ಹಾಗೂ ಶೈಕ್ಷಣಿಕ ಕಟ್ಟಡಗಳ ನಿರ್ಮಾಣ ಕಾರ್ಯವು ಮುಕ್ತಾಯ ಹಂತದಲ್ಲಿದ್ದು, ಮೂಲಭೂತ ಸೌಕರ್ಯಗಳಾದ ರಸ್ತೆ ಹಾಗೂ ನೀರು ಸರಬರಾಜು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಸದರಿ ವಿಶ್ವವಿದ್ಯಾಲಯಕ್ಕೆ ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ 361 ಮಹಾವಿದ್ಯಾಲಯಗಳು ಸಂಯೋಜನೆಗೊಂಡಿದ್ದು 1.39 ಲಕ್ಷ ಸ್ನಾತ್ತಕ, ಸ್ನಾತ್ತೋತ್ತರ ಹಾಗೂ ಪಿ.ಹೆಚ್.ಡಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ ಅಧ್ಯಯನ ಪೀಠ, ರಾಣಿ ಚನ್ನಮ್ಮ ಅಧ್ಯಯನ ಪೀಠ, ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠಗಳು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ನಾಲ್ಕು ವಿಷಯಗಳಲ್ಲಿ ಪಿ.ಜಿ. ಡಿಪ್ಲೊಮಾ ಕೋರ್ಸುಗಳು ಹಾಗೂ 325ಕ್ಕಿಂತ ಹೆಚ್ಚು ಸಂಶೋಧನಾರ್ಥಿಗಳಿಂದ ಹಲವಾರು ವಿಷಯಗಳ ಕುರಿತು ಪಿ.ಹೆಚ್.ಡಿ. ಸಂಶೋಧನೆಗಳು ಜರುಗುತ್ತಿವೆ.
ಗೌರವ ಡಾಕ್ಟರೇಟ್ ಪ್ರಶಸ್ತಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದ ಸಂದರ್ಭದಲ್ಲಿ ಪರಿಸರ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿವಾಜಿ ಛತ್ತು ಕಾಗಣಿಕರ್ ಅವರಿಗೆ ಶಿಕ್ಷಣ, ಸಮಾಜ ಸೇವೆ, ಪರಂಪರೆ ಸಂರಕ್ಷಣೆ ಕ್ಷೇತ್ರದಲ್ಲಿ ವಿನೋದ ಸುರೇಂದ್ರ ದೊಡ್ಡಣ್ಣವರ ಅವರಿಗೆ ಹಾಗೂ ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಬಸವರಾಜ ಯಲಿಗಾರ ಅವರಿಗೆ ಗೌರವ ಡಾಕ್ಟರೇಟ ಪದವಿಯನ್ನು ನೀಡಲಾಗುವುದು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಒಟ್ಟು 38485 ವಿದ್ಯಾರ್ಥಿಗಳು (36642 ಸ್ನಾತಕ ಹಾಗೂ 1843 ವಿದ್ಯಾರ್ಥಿಗಳು ಸ್ನಾತ್ತಕೋತ್ತರ) ಪದವಿಯನ್ನು ಪಡೆದುಕೊಳ್ಳಲು ಅರ್ಹರಾಗಿದ್ದು, 125 ವಿದ್ಯಾರ್ಥಿಗಳು ಬ್ಯಾಂಕ್ ಪಡೆದಿದ್ದು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 39 ಸುವರ್ಣ ಪದಕಗಳನ್ನು, 04 ವಿಷಯವಾರು ಅಗ್ರ ಶ್ರೇಯಾಂಕಿತರು ಹಾಗೂ ಒಂದು ನಗದು ಬಹುಮಾನವನ್ನು (ಇಬ್ಬರು ವಿದ್ಯಾರ್ಥಿಗಳಿಗೆ), 28 ಪಿ.ಹೆಚ್.ಡಿ ಪದವಿಗಳನ್ನು ಪ್ರಧಾನ ಮಾಡಲಾಗುವುದು ಎಂದು ಕುಲಪತಿಗಳಾದ ಪ್ರೊ. ಸಿ.ಎಂ.ತ್ಯಾಗರಾಜ ಅವರು ತಿಳಿಸಿದರು.
ಸ್ವರ್ಣ ಪದಕ ವಿಜೇತ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳ ವಿವರ
ಸ್ನಾತಕ ವಾಣಿಜ್ಯ ವಿಭಾಗದಲ್ಲಿ ಗೋಕಾಕನ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ರೂಪಾ ನಾಯಕ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಅಂಬಿಕಾ ಮಳೆದ, ವಿಜ್ಞಾನ ವಿಭಾಗದಲ್ಲಿ ಬೆಳಗಾವಿ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ನಿಕಿತಾ ಪಸಾರೆ, ಕಲಾ ವಿಭಾಗದಲ್ಲಿ ಚಿಕ್ಕೋಡಿ ತಾಲೂಕಾ ಶಿಕ್ಷಣ ಸಂಸ್ಥೆಯ ರಿಯಾ ಕುಲ್ಕರ್ಣಿ, ಬಿ.ಬಿ.ಎ ವಿಭಾಗದಲ್ಲಿ ವಿಜಯಪುರದ ಚೇತನಾ ಬಿ.ಬಿ.ಎ ಶಿಕ್ಷಣ ಸಂಸ್ಥೆಯ ನಂದೀಶ ಬಳೂತಿ, ಬಿ.ಸಿ.ಎ ವಿಭಾಗದಲ್ಲಿ ನಿಡಸೋಸಿಯ ಎಸ್.ಎನ್.ಜೆ.ಪಿ.ಎಸ್.ಎನ್.ಎಮ್.ಎಸ್ ಸಂಸ್ಥೆಯ ಪಲ್ಲವಿ ನಿಕ್ಕಮ, ಬೃಚುಲರ್ ಆಫ್ ಸೈನ್ಸ್ ಇನ ಶುಗರ್ ಸೈನ್ಸ ಆಯಂಡ ಟೆಕ್ನಾಲಾಜಿ ವಿಭಾಗದಲ್ಲಿ ಬೆಳಾಗವಿಯ ಎಸ್. ನಿಜಅಂಗಪ್ಪ ಶುಗರ್ ಇನ್ಸಿಟ್ಯುಟ್ನ ರಾಹುಲ ಸುರಾಗಾಂವಿ, ದೈಹಿಕ ಶಿಕ್ಷಣ ವಿಭಾಗದಲ್ಲಿ ಶ್ರೀ ಶಿವಯೋಗಿ ಸಂಗಮಾರ್ಯ ವಿದ್ಯಾ ಸಂಸ್ಥೆಯ ವೀರೇಶ ಚಿನ್ನಾಪೂರ, ಸಾಮಾಜ ಕಾರ್ಯ ವಿಭಾಗದಲ್ಲಿ ಬಾಗಲಕೋಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂಜರಿ ಮಂದಿ, ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪೂಜಾ ಕಾಂಬಳೆ ಹಾಗೂ ಮಲ್ಲಕಾರ್ಜುನ ಪೂಜಾರಿ, ಇಂಗ್ಲೀಷ ವಿಭಾಗದಲ್ಲಿ ಲೋಕಾಪುರದ ಜಾಧವಜಿ ಶಿಕ್ಷಣ ಸಂಸ್ಥೆಯ ವಿನಾಯಕ ಘುಳಪ್ಪನ್ನವರ, ಮರಾಠಿ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರೇಷ್ಮಾ ಕಾಂಬಳೆ, ಅರ್ಥಶಾಸ್ತ್ರ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಜ್ಯೋತಿ ದಸ್ತಿಕೊಪ್ಪ, ಇತಿಹಾಸ ಮತ್ತು ಪ್ರಾಜ್ಞೆ ವಸ್ತುಶಾಸ್ತ್ರ ವಿಭಾಗದಲ್ಲಿ ಶಿಕ್ಷಣ ಪ್ರಸಾರಕ ಮಂಡಳದ ತುಜಾರ ಮಜಲಟ್ಟ, ಪತ್ರಿಜ್ಯೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಬೆಳಗಾವಿಯ ರಾಣೆ ಚನ್ನಮ್ಮ ವಿಶ್ವವಿದ್ಯಾಲಯದ ಮಂಜುನಾಥ ನಿಲುಗಲ್ಲ, ರಾಜ್ಯ ಶಾಸ್ತ್ರ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕವಿತಾ ಹೊಸಮನಿ, ಸಮಾಜಶಾಸ್ತ್ರ ವಿಭಾಗದಲ್ಲಿ ರೂಪಾ ಕಾರಹೊಳ, ಸಮಾಜ ಕಾರ್ಯ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂದ್ಯಾ ಕೋಲ್ಕರ್, ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಚೈತ್ರಾ ಪಟ್ಟಣಶೆಟ್ಟಿ, ಸಸ್ಯಶಾಸ್ತ್ರ ವಿಭಾಗದ ಚಿಕ್ಕೋಡಿಯ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಯಶೋಧಾ ಕಂಬಾರ, ರಸಾಯನ ಶಾಸ್ತ್ರ ವಿಭಾಗದಲ್ಲಿ ಸೌತ ಕೊಂಕಣ ಶಿಕ್ಷಣ ಸಂಸ್ಥೆಯ ಸಹನಾ ತರಗರ, ಗಣಕ ವಿಜ್ಞಾನ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶ್ರೇಣಿಕಾ ಪವಾರ, ಜಿಯೋಗ್ರಾಫಿ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಿರಣ ಮಂಟೂರ, ಗಣಿತ ಶಾಸ್ತ್ರದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಿನಾಲ್ ಬಡಿಗೇರ, ಭೌತಶಾಸ್ತ್ರ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಂತವ್ವ ಸಂಗನ್ನವರ, ಪ್ರಾಣಿ ಶಾಸ್ತ್ರ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪೂಜಾ ಗಡವೆ, ಗ್ರಂಥಾಲಯ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸುಪ್ರಿಯಾ ಕಾಂಬಳೆ, ವಾಣಿಜ್ಯ ಶಾಸ್ತ್ರದಲ್ಲಿ ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಅಮೃತಾ ಕಾಂಬಳೆ, ಶಿಕ್ಷಣ ಶಾಸ್ತ್ರದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಸಂತ ಮೇಲಿನಮನಿ, ದೈಹಿಕ ಶಿಕ್ಷಣ ವಿಭಾಗದಲ್ಲಿ ತನುಜಾ ಬಿ, ಅಲ್ಲೋಹಾಲಿಕ ಟೆಕ್ನಾಲಾಜಿ ವಿಭಾಗದಲ್ಲಿ ಎಸ್.ನಿಜಲಿಂಗಪ್ಪ ಶುಗರ ಇನ್ಸಿಟಿಟ್ಯೂಟನ್ ಅನುಶ್ರೀ, ಚನ್ನಗಿರಿ, ಬೈಯೋ-ಕೆಮಿಸ್ಟ್ರಿ ವಿಭಾಗದಲ್ಲಿ ಸೌಥ ಕೊಂಕಣ ಶಿಕ್ಷಣ ಸಂಸ್ಥೆಯ ಗಾಯತ್ರಿ ಕುಲಕಣಿ, ಎನವಿರಾನಮೆಂಟಲ್ ಸೈನ್ಸ್ ವಿಭಾಗದಲ್ಲಿ ಸೌಥ ಕೊಂಕಣ ಶಿಕ್ಷಣ ಸಂಸ್ಥೆಯ ಅಪರ್ಣಾ ಪಾಟೀಲ, ಮೈಕ್ರೋ ಬೈಯಾಲಾಜಿ ವಿಭಾಗದಲ್ಲಿ ಸೌಥ ಕೊಂಕಣ ಶಿಕ್ಷಣ ಸಂಸ್ಥೆಯ ಅನುರಾಧ ಮಹಾನ ಅವರುಗಳು ಹಾಗೂ ವಿಷಯವಾರು ಅಗ್ರ ಶ್ರೇಯಾಂಕಿತರಾದ ಬ್ಯಾಚುಲರ್ ಇಂಗ್ಲೀಷ ವಿಭಾಗದಲ್ಲಿ ಮುಷಾಬಹರೀನ ಕಡಲಗಿ, ಬ್ಯಾಚುಲರ್ ಆಫ್ ಕನ್ನಡ ವಿಭಾಗದಲ್ಲಿ ಶೋಭಾ ಗಿರಿಮಲ್ಲನವರ, ಬ್ಯಾಚುಲರ್ ಆಫ್ ಸೋಸಿಯಾಲಾಜಿ ವಿಭಾಗದಲ್ಲಿ ವಾಣಿಶ್ರೀ ಮುಂಚೆ, ಕಾಸ್ಟ ಆಂಡ್ ಟ್ಯಾಕ್ಸಶನ್ ವಿಭಾಗದಲ್ಲಿ ಪ್ರತೀಕ್ಷಾ ನೂಲಿ ಅವರುಗಳಿಗೆ ಸ್ವರ್ಣ ಪದಕಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಸಚಿವರಾದ ಸಂತೋಷ ಕಾಮಗೌಡ, ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೋ. ಡಿ.ಎನ್.ಪಾಟೀಲ, ಹಣಕಾಸು ಅಧಿಕಾರಿಗಳಾದ ಎಂ.ಎ. ಸಪ್ನ, ಪ್ರೋ. ಕಮಲಾಕ್ಷಿ ತಡಸದ ಹಾಗೂ ಪ್ರೋ. ಅಶೋಕ ಡಿಸೋಜಾ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



