
ಪ್ರಗತಿವಾಹಿನಿ ಸುದ್ದಿ: ಸುದ್ದಿ ನಿರೂಪಕಿಯೊಬ್ಬರು ನ್ಯೂಸ್ ರೂಂ ಒಳಗೆ ಶವವಾಗಿ ಪತೆಯಾಗಿರುವ ಘಟನೆ ನಡೆದಿದೆ. ನಿರೂಪಕಿ ಮದುವೆಗೆ ದಿನಾಂಕ ನಿಗದಿಯಾಗಿತ್ತು. ಮದುವೆಗೆ ಒಂದು ವಾರ ಇರುವಾಗ ಕಚೇರಿಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾಳೆ.
ಅಸ್ಸಾಂನ ಗುವಾಹಟಿಯಲ್ಲಿ ಈ ಘಟನೆ ನಡೆದಿದೆ. ನ್ಯೂಸ್ ರೂಂ ನಲ್ಲಿಯೇ ನಿರೂಪಕಿ ಸಾವನ್ನಪ್ಪಿದ್ದು, ಡೆತ್ ನೋಟ್ ಕೂಡ ಪತ್ತೆಯಾಗಿದೆ. ಆರ್ಥಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬದವರು ಹೇಳುತ್ತಿದ್ದಾರೆ. ಮೃತಳನ್ನು ರಿತುಮೊನಿ ರಾಯ್ ಆಂದು ಗುರುತಿಸಲಾಗಿದೆ. ಡಿಸೆಂಬರ್ ೫ರಂದು ರಿತು ಅವರ ಮದುವೆಗೆ ದಿನಾಅಂಕ ನಿಗದಿಯಾಗಿತ್ತು. ಆದರೆ ಮದುವೆ ಒಂದು ವಾರವಿರುವಾಗಲೇ ರಿತು ಶವವಾಗಿ ಪತ್ತೆಯಾಗಿದ್ದಾರೆ.
ನಿರೂಪಕಿ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ಬಳಿಕವೇ ಸುದ್ದಿ ನಿರೂಪಕಿ ಸಾವಿಗೆ ನಿಖರ ಕಾರಣ ತಿಳಿಯಲಿದೆ.


