Kannada NewsKarnataka NewsLatest
*ಬೆಳಗಾವಿಯಲ್ಲಿ ಘೋರ ಘಟನೆ: ನಾಲ್ಕನೆಯದೂ ಹೆಣ್ಣು ಎಂದು ನವಜಾತ ಮಗುವನ್ನೇ ಕೊಲೆಗೈದ ತಾಯಿ*

ಪ್ರಗತಿವಾಹಿನಿ ಸುದ್ದಿ: ನಾಲ್ಕನೇ ಮಗು ಕೂಡ ಹೆಣ್ಣು ಮಗು ಎಂದು ಹೆತ್ತ ತಾಯಿಯೇ ನವಜಾತ ಶಿಶುವನ್ನು ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ನಡೆದಿದೆ.
ಹೆಣ್ಣುಮಗು ಹುಟ್ಟಿದ್ದಕ್ಕೆ ಮಗುವಿನ್ ಅಕತ್ತು ಹಿಸುಕಿ 3 ದಿನಗಳ ಹಸುಗೂಸನ್ನು ತಾಯಿಯೇ ಕೊಲೆ ಮಾಡಿದ್ದಾಳೆ. ಅಶ್ವಿನಿ ಹಳಕಟ್ಟಿ ಕೊಲೆ ಮಾಡಿದ ಮಗುವಿನ ತಾಯಿ. ಸ್ಥಳಕ್ಕೆ ರಾಮದುರ್ಗ ಡಿವೈಎಸ್ ಪಿ ಚಿದಂಬರ ಮಡಿವಾಳರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಂದ ಬಳಿಕ ಮಗು ಉಸಿರಾಡುತ್ತಿಲ್ಲ ಎಂದು ನಾಟಕ ಮಾಡಿದ್ದಾಳೆ. ತಕ್ಷಣ ರಾಮದುರ್ಗ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರು ಕತ್ತು ಹಿಸುಕಿ ಮಗುವನ್ನು ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.



