
ಪ್ರಗತಿವಾಹಿನಿ ಸುದ್ದಿ: ವಾಣಿಜ್ಯ LPG ಸಿಲಿಂಡರ್ ದರಗಳು ಇಳಿಕೆ ಕಂಡಿದೆ. ಆದ್ರೆ ಗೃಹ ಬಳಕೆ ಗ್ಯಾಸ್ ದರ ಯಥಾಸ್ಥಿತಿಯಲ್ಲಿದೆ.
19 ಕೆ.ಜಿ. ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ರೂ.10 ರಷ್ಟು ಇಳಿಕೆ ಮಾಡಲಾಗಿದೆ. ಈ ಬಗ್ಗೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಹೊಸದರ ಪಟ್ಟಿ ರಿಲೀಸ್ ಮಾಡಲಾಗಿದೆ. ಇಂದಿನಿಂದಲೇ ಹೊಸ ದರ ಅನ್ವಯವಾಗಲಿದೆ.
ವಾಣಿಜ್ಯ ಸಿಲಿಂಡರ್ ದರ ಅಕ್ಟೋಬರ್‌ನಲ್ಲಿ ರೂ.16 ಹೆಚ್ಚಳ ಕಂಡಿತ್ತು. ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ ರೂ.51 ಇಳಿಕೆ ಆಗಿತ್ತು. ಈಗ ಮತ್ತೆ ಡಿಸೆಂಬರ್‌ನಲ್ಲಿ ದರ ಇಳಿಕೆಯಿಂದ ವ್ಯಾಪಾರಿಗಳು ಕೊಂಚ ನಿಟ್ಟಿಸಿರು ಬಿಡುವಂತಾಗಿದೆ.
ಇನ್ನು ಪ್ರತಿನಿತ್ಯ ಜನಸಾಮಾನ್ಯರು ಬಳಸುವ 14.2 ಕೆ.ಜಿ. ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿದೆ.



