
ಪ್ರಗತಿವಾಹಿನಿ ಸುದ್ದಿ: ಮಕ್ಕಳನ್ನು ಚೈಲ್ಡ್ ಕೇರ್ ಸೆಂಟರ್ ಗಳಲ್ಲಿ ಬಿಟ್ತು ಹೋಗುವ ಪೋಷಕರು, ಮಕ್ಕಳನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಿಕೊಳ್ಳುವ ಮೊದಲು ಈ ಸುದ್ದಿಯನ್ನು ನೋಡಲೇಬೇಕು.
ಚೈಲ್ಡ್ ಕೇರ್ ಸೆಂಟರ್ ನಲ್ಲಿ ಮಹಿಳಾ ಕೇರ್ ಟೇಕರ್ ಓರ್ವಳು ನಾಲ್ಕು ವರ್ಷದ ಮಗುವನ್ನು ಮನಬಂದಂತೆ ಹೊಡೆದು, ನೆಲಕ್ಕಪ್ಪಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ.
ಹೈದರಾಬಾದ್ ನ ಜೇಡಿಮೆಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಪೂರ್ಣಿಮಾ ಚೈಲ್ ಕೇರ್ ಸೆಂಟರ್ ನಲ್ಲಿ ಆಯಾ ಒಬ್ಬರು ನಾಲ್ಕು ವರ್ಷದ ಮಗು ಊಟ ಮಾಡಿಲ್ಲ ಎಂಬ ಕಾರಣಕ್ಕೆ ಮಗುವನ್ನು ಹಿಡಿದು ಮನಬಂದಂತೆ ಹೊಡೆದಿದ್ದಾಳೆ. ಪದೆ ಪದೇ ಮಗುವನ್ನು ನೆಲಕ್ಕಪ್ಪಳಿಸಿದ್ದಲ್ಲದ್ದೆ ಕತ್ತು ಹಿಸುಕಿ ಹಿಂಸಿಸಿದ್ದಾಳೆ. ಮಗು ಪರದಾಡುತ್ತಾ ಮತ್ತೆ ಮತ್ತೆ ಎದ್ದು ಕುಳಿತುಕೊಳ್ಳುತ್ತಿದ್ದಂತೆ ಮತ್ತೆ ಮಗುವನ್ನು ಹಿಡಿದು ತಳ್ಳಿ ಬೀಳಿಸಿದ್ದಾಳೆ. ಸಾಲದ್ದಕ್ಕೆ ಮಗುವನ್ನೆ ನೆಲಕ್ಕೆ ಬೀಳಿಸಿ ಮಗುವನ್ನು ಕಾಲಿನಿಂದ ತುಳಿದು ಹಿಂಸಿ ರಾಕ್ಷಸಿಯಂತೆ ಆಯಾ ಅಟ್ಟಹಾಸ ಮೆರೆದಿದ್ದಾಳೆ. ಆಯಾಳ ಕ್ರೌರ್ಯಕ್ಕೆ ನಲುಗಿದ ಮಗು ಸಾವು-ಬದುಕಿನ ಜೊತೆ ಹೋರಾಟ ನಡೆಸಿದೆ. ಈ ಹೃದಯವಿದ್ರಾವಕ ದೃಶ್ಯವನ್ನು ಪಕ್ಕದ ಕಟ್ಟಡದ ಟೆರೇಸ್ ಮೇಲೆ ನಿಂತಿದ್ದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ತಕ್ಷಣ ಪೊಲೀಸರು ಕ್ರಾರ್ಯಪ್ರವೃತ್ತರಾಗಿ ಆಯಾಳನ್ನು ಬಂಧಿಸಿದ್ದು, ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚೈಲ್ಡ್ ಕೇರ್ ಸೆಂಟರ್ ನ್ನು ಮುಚ್ಚಿಸಿದ್ದಾರೆ. ಬಂಧಿತ ಆಯಾಳನ್ನು ಲಕ್ಷ್ಮೀ ಎಂದು ಗುರುತಿಸಲಾಗಿದೆ. ಕೇರ್ ಟೇಕರ್ ಳ ಈ ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಮಗುವನ್ನು ಹೊಡೆದು, ನೆಲಕ್ಕಪಳಿಸಿ, ತುಳಿದು ಅಟ್ಟಹಾಸ ಮೆರೆಯುತ್ತಿರುವ ದೃಶ್ಯ ಕರುಳುಹಿಂಡುವಂತಿದೆ.




