*ಅಗತ್ಯ ಬಿದ್ದರೆ ನಾನೂ ಬ್ರೇಕ್ ಫಾಸ್ಟ್ ಗೆ ಕರೆಯುತ್ತೇನೆ: ಗೃಹ ಸಚಿವ ಪರಮೇಶ್ವರ*

ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರನ್ನು ಬ್ರೇಕ್ ಫಾಸ್ಟ್ ಗೆ ಕರೆಯುತ್ತೇನೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪಕ್ಷದಲ್ಲಿ ಸದ್ಯ ಎಲ್ಲವೂ ತಿಳಿಯಾಗಿದೆ, ಖುಷಿಯ ವಾತಾವರಣ ಇದೆ. 2ನೇ ಬಾರಿಯೂ ನನ್ನ ಕರೆದಿಲ್ಲ. ಬ್ರೇಕ್ ಫಾಸ್ಟ್ ಗೆ ನನ್ನ ಕರೆದಿದ್ದರೆ ಹೋಗುತ್ತಿದ್ದೆ ನೋಡೋಣ ಅಗತ್ಯ ಬಿದ್ದರೆ ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ಬ್ರೇಕ್ ಫಾಸ್ಟ್ ಗೆ ಕರೆಯುತ್ತೇನೆ ಎಂದರು.
ನಿನ್ನೆ ಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ಆಯೋಜನೆ ಮಾಡಲಾಗಿತ್ತು. ಇಂದು ಡಿ.ಕೆ ಶಿವಕುಮಾರ್ ಮನೆಯಲ್ಲಿ ಆಯೋಜಿಸಲಾಗಿದೆ. ನಾನು ಯಾಕೆ ಇಬ್ಬರನ್ನು ನನ್ನ ಮನೆಗೆ ಬ್ರೇಕ್ ಫಾಸ್ಟ್ ಗೆ ಕರೆಯಬಾರದು ? ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದರು.
ಜಿ.ಪರಮೇಶ್ವರ್ ಸಿಎಂ ಆಗಲಿ ಎಂಬ ಅಭಿಮಾನಿಗಳ ಹೇಳಿಕೆ ವಿಚಾರವಾಗಿ ಎಲ್ಲ ನಾಯಕರ ಅಭಿಮಾನಿಗಳಿಗೆ ಸಿಎಂ ಆಗಲಿ ಅಂತ ಆಸೆ ಇದ್ದೇ ಇರುತ್ತದೆ ತಮ್ಮ ನಾಯಕರು ಮುಖ್ಯಮಂತ್ರಿ ಆಗಲಿ ಅಂತ ಆಸೆ ಇರುತ್ತದೆ ಅದರಲ್ಲಿ ತಪ್ಪೇನಿದೆ? ಎಂದರು.



