Kannada NewsKarnataka NewsNationalPolitics

*ನಕಲಿ ಸ್ಪಾ ಸೆಂಟರ್ ಮೇಲೆ ಪೊಲೀಸರ ದಾಳಿ: 13 ಜನರ ಬಂಧನ*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ, ಸ್ಪಾ ಸೆಂಟರ್ ಹೆಸರಿನಲ್ಲಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

ಈ ಜಾಲದಲ್ಲಿ ಪ್ರಭಾವಿಗಳ ಹೆಸರು ಕೇಳಿ ಬಂದಿದೆ. ವಾರಣಾಸಿ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡವು ಸಿಗ್ರಾ ಪ್ರದೇಶದ ಮೆಲೋಡಿ ಸ್ಪಾ ಮತ್ತು ತ್ರಿನೇತ್ರ ಭವನದಲ್ಲಿ ಇರುವ ಸ್ಪಾ ಸೆಂಟರ್ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ಜಾಲವನ್ನು ಭೇದಿಸಿದೆ. ಈ ಪ್ರಕರಣದಲ್ಲಿ ಒಂಬತ್ತು ಮಹಿಳೆಯರು ಸೇರಿದಂತೆ ಸುಮಾರು 13 ಜನರನ್ನು ಬಂಧಿಸಲಾಗಿದೆ.

ಮೆಲೋಡಿ ಸ್ಪಾ ಮತ್ತು ತ್ರಿನೇತ್ರ ಭವನದಲ್ಲಿ ನಡೆದ ದಾಳಿಯ ಸಮಯದಲ್ಲಿ, ಫ್ಲಾಟ್ ಸಂಖ್ಯೆ 112 ರಲ್ಲಿ ನಾಲ್ಕು ಮಹಿಳೆಯರು ಮತ್ತು ಐದು ಪುರುಷರು ಇದ್ದರು. ಇದೆ ಕಟ್ಟಡದಿಂದ ಸುಮಾರು ₹23,100 ನಗದು ಮತ್ತು ಕೆಲವು ಅಪರಾಧ ಕೃತ್ಯಗಳನ್ನು ಮಾಡುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಮತ್ತೊಂದು ಫ್ಲಾಟ್‌ನಲ್ಲಿ ನಡೆದ ದಾಳಿಯಲ್ಲಿ ಐದು ಮಹಿಳೆಯರು ಭಾಗಿಯಾಗಿರುವುದು ಕಂಡುಬಂದಿದ್ದು, ಅಲ್ಲಿ ಅಪರಾಧ ಕೃತ್ಯಗಳನ್ನು ಮಾಡುವ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

Home add -Advt

ಮೆಲೋಡಿ ಸ್ಪಾ ಮತ್ತು ತ್ರಿನೇತ್ರ ಭವನದಲ್ಲಿ ನಡೆದ ದಾಳಿಯ ನಂತರ, ಸ್ಪಾ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ. ಪೊಲೀಸರು ಘಟನಾ ಸ್ಥಳದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ.

Related Articles

Back to top button