Belagavi NewsBelgaum NewsKannada NewsKarnataka News

*ರಂಗಸಂಪದದವರಿಂದ ರಂಗಭೂಮಿ ದಿನಾಚರಣೆ ಮತ್ತು ನಾಟಕೋತ್ಸವ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಇದೇ ದಿ. 5 ರಿಂದ 7 ರವಿವಾರದ ವರೆಗೆ ಮೂರು ದಿನಗಳ ಕಾಲ ರಂಗಸಂಪದದವರಿಂದ ಶಾಂತಕವಿ ಶ್ರೀ ಸಕ್ಕರಿ ಬಾಳಾಚಾರ್ಯ ಸ್ವರಣೆಯಲ್ಲಿ ಕನ್ನಡ ರಂಗಭೂಮಿ ದಿನಾಚರಣೆ ಮತ್ತು ಅಭಿಷೇಕ ಅಲಾನ್ಸ ನಾಟಕೋತ್ಸವ ನಡೆಯಲಿದೆ ಎಂದು ರಂಗಸಪದದ ಅಧ್ಯಕ್ಷ ಡಾ ಅರವಿಂದ ಕುಲಕರ್ಣಿ ತಿಳಿಸಿದರು.

ಇಂದು ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ದಿ. 5 ರಂದು ಶುಕ್ರವಾರದಂದು ಸಾಯಂಕಾಲ 6 ಗಂಟೆಗೆ ಅಭಿಷೇಕ ಅಲಾನ್ಸ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮವಿದ್ದು ನ್ಯಾಯವಾದಿ ಎಸ್. ಎಂ. ಕುಲಕರ್ಣಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉದ್ಯಮಿಗಳಾದ ಮದ್ವಾಚಾರ್ಯ ಆಯಿ ಉದ್ಘಾಟಿಸಲಿದ್ದಾರೆ. ಧಾರವಾಡದ ಖ್ಯಾತ ನಟ, ನಿರ್ದೇಶಕ, ಆಕಾಶವಾಣಿ ಉದ್ಘೋಶಕ ಡಾ. ಶಶಿಧರ ನರೇಂದ್ರ ಅತಿಥಿಗಳಾಗಿ ಆಗಮಿಸಲಿದ್ದು ಧಾರವಾಡದ ಮನೋಹರ ಗ್ರಂಥಮಾಲೆಯ ಸಮೀರ ಜೋಶಿ, ಧಾರವಾಡದ ಶ್ರೀ ಸಕ್ಕರಿ ಬಾಳಾಚಾರ್ಯ ಟ್ರಸ್ಟ್ ಕಾರ್ಯದರ್ಶಿಗಳಾದ ಹನಮೇಶ ಸಕ್ಕರಿ ಉಪಸ್ಥಿತರಿರುತ್ತಾರೆ. 

ನಿನಾಸಂ ತಿರುಗಾಟ-2025 ತಂಡದವರಿಂದ ಭಾನು ಮಷ್ತಾಕ ಕಥೆ ಆಧಾರಿತ ‘ಹೃದಯ ತೀರ್ಪು’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಂಗರೂಪ ಮತ್ತು ನಿರ್ದೇಶನ ಡಾ. ಎಂ. ಗಣೇಶ ಅವರದ್ದಾಗಿದೆ ಎಂದು ಹೇಳಿದರು.

ದಿ. 6 ಶನಿವಾರದಂದು ಸಾಯಂಕಾಲ 6:30 ಕ್ಕೆ ಅವತರಣಮ್ ಭ್ರಾಂತಾಲಯಂ’ ನಾಟಕ ಪ್ರದರ್ಶನಗೊಳ್ಳಿದೆ. ಮೂಲ ಮಳೆಯಾಳಂ ಭಾಷೆಯ ನಾಟಕದ ರಚರನೆ ಬಿ. ಶಂಕರ ಪಿಳ್ಳೆಯ ಅವರದ್ದಾಗಿದ್ದು  ಕನ್ನಡಕ್ಕೆ ನಾ. ದಾಮೋದ ಶೆಟ್ಟಿ ಅನುವಾದಿಸಿದ್ದಾರೆ. ಶಂಕರ ವೆಂಕಟೇಶ್ವರನ್ ನಿರ್ದೇಶನವಿದೆ.

Home add -Advt

ದಿ. 7 ರವಿವಾರ 6:30 ಕ್ಕೆ ಬೆಳಗಾವಿ ರಂಗಸಂಪದ ತಂಡದವರಿಂದ ಶ್ರೀ ವಿಜಯದಾಸರ ಚಮತ್ಕಾರಗಳನ್ನೊಳಗೊಂಡಿರುವ ಭಕ್ತಿ ಪ್ರಧಾನವಾದ ನಾಟಕ ‘ಸ್ಮರಿಸಿ ಬದುಕಿರೋ…’ ನಾಟಕ ಪ್ರದರ್ಶನಗೊಳ್ಳಲಿದೆ. ಗಂಗಾವತಿಯ ದಂಡಿನ ಅವರ ರಚನೆಯಾಗಿದ್ದು ಸೀಮಾ ಅವರ ಸಂಗೀತವಿದೆ. ಡಾ. ಅರವಿಂದ ಕುಲಕರ್ಣಿಯವರ ನಿರ್ದೇಶನವಿದೆ ಎಂದು ಮೂರೂ ದಿನದ ಕರ‍್ಯಕ್ರಮದ ವಿವರಣೆಯನ್ನು ಡಾ. ಕುಲಕರ್ಣಿಯವರು ನೀಡಿದರು.

ರಂಗಸಂಪದ ಪ್ರೇಕ್ಷಕ ಸದಸ್ಯತ್ವವನ್ನು ಹೊಂದಿದವರಿಗೆ ಪ್ರವೇಶ ಉಚಿತವಿದೆ. ಉಳಿದ ಪ್ರೇಕ್ಷಕರಿಗೆ ಒಬ್ಬರಿಗೆ ಸಹಾಯಧನವಾಗಿ 10) ರೂಪಾಯಿ ನೀಡಬೇಕಾಗುವುದು. ಪ್ರತಿ ಸರಿಯಾದ ಸಮಯಕ್ಕೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ 10 ನಿಮಿಷ ಮೊದಲೇ ಆಸೀರನಾಗಿರಬೇಕೆಂದು ಎಂದು ಹೇಳಿದರು.

ಕಾರ್ಯದರ್ಶಿ ಪ್ರಸಾದ ಕಾರಜೋಳ, ಉಪಾಧ್ಯಕ್ಷರಾದ ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ ಹಾಗೂ ಸದಸ್ಯರಾದ ಅಶೋಕ ಕುಲಕರ್ಣಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Articles

Back to top button