Belagavi NewsBelgaum NewsKannada NewsKarnataka NewsLatest

*ಪರಸ್ಪರ ಸಮನ್ವಯದೊಂದಿಗೆ ಚಳಿಗಾಲ ಅಧಿವೇಶನದ ಕಾರ್ಯನಿರ್ವಹಿಸಿ : ಜಿಪಂ ಸಿಇಒ ರಾಹುಲ್ ಶಿಂಧೆ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸೋಮವಾರ 08, 2025 ರಂದು ಬೆಳಗಾವಿ ಸುವರ್ಣ ಸೌಧದಲ್ಲಿ  ನಡೆಯಲಿರುವ ವಿಧಾನ ಮಂಡಲ ಅಧಿವೇಶನ ಪ್ರಯುಕ್ತ ಜಿಪಂ ಸಿಇಒ ರಾಹುಲ್ ಶಿಂಧೆ ರವರ ಅಧ್ಯಕ್ಷತೆಯಲ್ಲಿ ಅಧಿವೇಶನ ಕಾರ್ಯಕ್ಕೆ ನಿಯುಕ್ತಿಗೊಂಡ ಅಧಿಕಾರಿ/ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಪಂ ಸಿಇಒ ರಾಹುಲ್ ಶಿಂಧೆ ರವರು ಕಳೆದ ಬಾರಿಯ ಅಧಿವೇಶನ ಕಾರ್ಯವು ಯಾವುದೇ ಲೋಪವಿಲ್ಲದಂತೆ ಯಶಸ್ವಿಯಾಗಿ ಜರುಗಿತು. ಅದೇ ರೀತಿ ಈ ಬಾರಿಯ ಚಳಿಗಾಲದ ಅಧಿವೇಶನವೂ ಕೂಡಾ ಯಾವುದೇ ಲೋಪವಿಲ್ಲದಂತೆ ತಮಗೆ ಹಂಚಿಕೆಮಾಡಿದ ಕಾರ್ಯವನ್ನು ಶ್ರದ್ದೆಯಿಂದ ನಿರ್ವಹಿಸಿ ಅಧಿವೇಶನ ಕಾರ್ಯವನ್ನು ಯಶಸ್ವಿಗೊಳಿಸಿ ಎಂದು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ  ನೀಡಿದರು.

ಅದರಂತೆ, ಸುವರ್ಣ ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ಹಂಚಿಕೆ ಮಾಡಿದ ಕೊಠಡಿಯಲ್ಲಿ ಯಾವುದೇ ಸಾಮಗ್ರಿಗಳು ಕಡಿಮೆ ಆಗದಂತೆ ಕ್ರಮವಹಿಸುವುದು. ಸಂಪರ್ಕಾಧಿಕಾರಿಯಾಗಿ ನೇಮಕಗೊಂಡ ಅಧಿಕಾರಿಗಳು  ತಮಗೆ ಸಂಬಂಧಿಸಿದ ಇಲಾಖೆ ಹಾಗೂ ಸಚಿವಾಲಯದ ಅಧಿಕಾರಿಗಳ ಪ್ರವಾಸ ಕಾರ್ಯಕ್ರಮದ ಪಟ್ಟಿ (Tour Program Planing) ಕುರಿತು ಅವರ ಆಪ್ತ ಸಹಾಯಕರ ಮೂಲಕ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಹೊಟೇಲ್ಗಳಲ್ಲಿ  ವಸತಿ ವ್ಯವಸ್ಥೆಗೆ ಹಂಚಿಕೆಯಾದ ಕೊಠಡಿಗಳಲ್ಲಿ ಮುಂಚಿತವಾಗಿ ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವುದು, ಎಲ್ಲ ಸಂಪರ್ಕಾಧಿಕಾರಿಯಾಗಿ ನಿಯೋಜನೆಗೊಂಡ ಅಧಿಕಾರಿಗಳು ಕಡ್ಡಾಯವಾಗಿ ಇಂಟರನೆಟ್ ಸಂಪರ್ಕಕ್ಕಾಗಿ  ಸ್ವತ: ಡೊಂಗಲ್ ವ್ಯವಸ್ಥೆ ಮಾಡಿಕೊಂಡು ಮೇಲಾಧಿಕಾರಿಗಳು ಕೇಳಿದಾಗ ಅವರುಗಳಿಗೆ ಒದಗಿಸುವುದು. ಅದೇ ರೀತಿ ತಮ್ಮ-ತಮ್ಮ ಕೊಠಡಿಗಳಿಗೆ ಸಂಬಂಧಿಸಿದಂತೆ ಕಂಪ್ಯೂಟರ ಮತ್ತು ಪ್ರೀಂಟರಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳುವುದು ಹಾಗೂ ನಿರ್ವಹಣೆಯಲ್ಲಿಯಾವುದಾದರು ಲೋಪ ಕಂಡು ಬಂದಿದಲ್ಲಿ ನಿಯೋಜಿತ ತಾಂತ್ರೀಕ ಸಹಾಯಕರ ಸಂಪರ್ಕ ಮಾಡುವುದು. 

ಮುಂದುವರೆದು, ಅಧಿವೇಶನ ಕಾರ್ಯಕ್ಕೆ ಆಗಮಿಸಿದ ಇಲಾಖೆ ಹಾಗೂ ಸಚಿವಾಲಯದ ಅಧಿಕಾರಿಗಳಿಗೆ  ಸೂಕ್ತ ವಾಹನ ವ್ಯವಸ್ಥೆ ಕಲ್ಪಿಸಿಕೊಡುವುದು. ಅದೇ ರೀತಿ ಅಧಿವೇಶನಕ್ಕೆ ಆಗಮಿಸಿದ ಇಲಾಖೆಯ ಮೇಲಾಧಿಕಾರಿಗಳು  ಜಿಲ್ಲೆಯಲ್ಲಿನ ಇತರೆ ಯೋಜನೆಗಳಿಗೆ ಸಂಬಂಧಿಸಿದಂತೆ ಗ್ರಾಮ  ಪಂಚಾಯತಗಳ ಕ್ಷೇತ್ರ ಭೇಟಿ ನೀಡಲು ಇಚ್ಚಿಸಿದಲ್ಲಿ ಅವರುಗಳಿಗೆ ಸೂಕ್ತ ವಾಹನ ವ್ಯವಸ್ಥೆ ಕಲ್ಪಿಸಿಕೊಡಲು ತಿಳಿಸಿದರು. 

Home add -Advt

ಅಧಿವೇಶನ ಕಾರ್ಯಕ್ಕೆ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು  ಮೇಲಾಧಿಕಾರಿಗಳ  ಪೋನ್ ಕಾಲ್ ಗಳಿಗೆ ಸರಿಯಾಗಿ ಸ್ಪಂದಿಸುವುದು ಹಾಗೂ  ಯಾವುದಾದರು ಸಮಸ್ಯೆ ಬಂದಿದ್ದಲಲ್ಲಿ ಜಿಲ್ಲಾ ಪಂಚಾಯತನ ಉಪಕಾರ್ಯದರ್ಶಿ  ಹಾಗೂ  ಯೋಜನಾ ನಿರ್ದೇಶಕರುಗಳಿಗೆ ನೇರವಾಗಿ ಸಂಪರ್ಕಿಸುವುದು ಹಾಗೂ ಎಲ್ಲಾ ನಿಯೋಜಿತ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವುದು. ತಪ್ಪಿದ್ದಲ್ಲಿ ಅಂತಹ ಅಧಿಕಾರಿ/ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ  ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ(ಆಡಳಿತ) ಬಸವರಾಜ್ ಹೆಗ್ಗನಾಯಕ್, ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ, ಮುಖ್ಯ ಲೆಕ್ಕಾಧಿಕಾರಿ, ಪರಶುರಾಮ್ ದುಡಗುಂಟಿ, ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ್ , ಸಹಾಯಕ ಕಾರ್ಯದರ್ಶಿ  ರಾಹುಲ್ ಕಾಂಬಳೆ, ಕಛೇರಿ ವ್ಯವಸ್ಥಾಪಕ ಬಸವರಾಜ್ ಮುರಘಾಮಠ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Back to top button