Latest

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮನೆ ಮನೆ ಜಾಗೃತಿ ಅಭಿಯಾನಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ,  ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ಸೇರಿ ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಪೌರತ್ವ ಕಾಯ್ದೆ ವಿಚಾರದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಜೆಪಿಯಿಂದ ಮನೆ ಮನೆ ಆಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಬೆಂಗಳೂರಿನ ವಸಂತನಗರದಲ್ಲಿ ಪೌರತ್ವ ತಿದ್ದುಪಡಿ ಪರ ಜಾಗೃತಿಗಾಗಿ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದರು. ಪೌರತ್ವ ಕಾಯ್ದೆ ವಿಚಾರದಲ್ಲಿ ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಇದಾಗಿದ್ದು,  ರಾಜ್ಯಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ನಾಯಕರು  ಮನೆ ಮನೆಗೆ ತೆರಳಿ ಈ ಕುರಿತು ಅರಿವು ಮೂಡಿಸಲಿದ್ದಾರೆ.  ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಸಿಎಎ ಜಾಗೃತಿ ಆಭಿಯಾದ ಜವಾಬ್ದಾರಿಯನ್ನು ಹೊರಿಸಲಾಗಿದೆ.

ಅಭಿಯಾನದ ಜವಾಬ್ದಾರಿ ಹೊತ್ತ ನಾಯಕರ ಪಟ್ಟಿ:

* ಬೆಂಗಳೂರು ಕೇಂದ್ರ – ಬಿ ಎಸ್ ಯಡಿಯೂರಪ್ಪ

* ಹುಬ್ಬಳ್ಳಿ – ಧಾರವಾಡ – ಪ್ರಹ್ಲಾದ ಜೋಶಿ

* ಬೆಂಗಳೂರು ಉತ್ತರ- ಡಿ ವಿ ಸದಾನಂದ ಗೌಡ

ಬೆಂಗಳೂರು ದಕ್ಷಿಣ – ಸಿ ಎನ್ ಅಶ್ವಥ್ ನಾರಯಣ

* ಬಳ್ಳಾರಿ – ಲಕ್ಷ್ಮಣ್ ಸವದಿ

* ಗದಗ – ಗೋವಿಂದ ಕಾರಜೋಳ

* ಧಾರವಾಡ – ಜಗದೀಶ್ ಶೆಟ್ಟರ್

* ಶಿವಮೊಗ್ಗ – ಕೆ ಎಸ್ ಈಶ್ವರಪ್ಪ

* ತುಮಕೂರು- ಆರ್ ಅಶೋಕ್

* ಮೈಸೂರು – ಅರವಿಂದ್ ಲಿಂಬಾವಳಿ

* ಚಿಕ್ಕಮಗಳೂರು- ಸಿಟಿ ರವಿ

* ಬೆಂಗಳೂರು ಕೇಂದ್ರ – ಸೋಮಣ್ಣ

* ಚಿತ್ರದುರ್ಗ- ಶಶಿಕಲಾ ಜೊಲ್ಲೆ

* ಕೊಪ್ಪಳ – ಸಿ ಸಿ ಪಾಟೀಲ್

* ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ

* ಚಿಕ್ಕಬಳ್ಳಾಪುರ – ಶೋಭಾ ಕರಂದ್ಲಾಜೆ

* ಹಾವೇರಿ – ಶಿವಕುಮಾರ್ ಉದಾಸಿ

* ಬಾಗಲಕೋಟೆ – ಪಿಸಿ ಗದ್ದಿಗೌಡರ್

* ವಿಜಯಪುರ- ರಮೇಶ್ ಜಿಗಜಿಣಗಿ

* ಬೀದರ್ – ಭಗವಂತ ಕೂಬಾ

* ಚಿಕ್ಕೋಡಿ – ಮಹಾಂತೇಶ್ ಕವಟಗಿಮಠ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button