
ಪ್ರಗತಿವಾಹಿನಿ ಸುದ್ದಿ: ಮಗನನ್ನು ಹತ್ಯೆಗೈದು ಬಳಿಕ ತಾಯಿ ಹಾಗೂ ಅಜ್ಜಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೋರಮಂಗಲದ ತಾವರೆಕೆರೆ ಬಳಿಯ ಎಸ್.ಜಿ.ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಮೌನಿಶ್ (14), ತಾಯಿ ಸುಧಾ ಹಾಗೂ ಅಜ್ಜಿ ಮುದ್ದಮ್ಮ ಮೃತರು. ಮಗ ಮೌನೀಶ್ ಗೆ ವಿಷ ಕುಡಿಸಿ ಕೊಲೆಗೈದು ಬಳಿಕ ತಾಯಿ ಹಾಗೂ ಅಜ್ಜಿ ಕೂಡ ವಿಷ ಸೇವ್ಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಸ್.ಜಿ.ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಿರಿಯಾನಿ ಹೋಟೆಲ್ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸುಧಾ ಹಾಗೂ ಮುದ್ದಮ್ಮ ಅವರಿಗೆ ನಷ್ಟವಾಗಿದ್ದರಿಂದ ಅದನ್ನು ಬಿಟ್ಟು ಚಿಪ್ಸ್ ಹಾಗೂ ಹಾಲು ಮಾಅರುತ್ತಿದ್ದರು. ಬಳಿಕ ಮನೆ ಕೆಲಸಕ್ಕೂ ಹೋಗುತ್ತಿದ್ದರು. ಆದರೆ ಸಾಲದ ಹಣ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.



