Belagavi NewsBelgaum NewsKannada NewsKarnataka NewsPolitics

*ಖಜಾನೆ ಖಾಲಿ ಖಾಲಿ, ಕಾಂಗ್ರೆಸ್ ನವರು ಜಾಲಿ ಜಾಲಿ: ವಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೈತರ ಆತ್ಮಹತ್ಯೆ ವಿಚಾರದಲ್ಲಿ ರಾಜ್ಯ ದೇಶದಲ್ಲೇ ಎರಡನೇಯ ಸ್ಥಾನದಲ್ಲಿ ಇದೆ. ರೈತರ ಒಳತಿಗಾಗಿ ನಾಳೆ ನಾವು ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ನಾಳೆ ನಡೆಯುವ ಪ್ರತಿಭಟನಾ ಸ್ಥಳ ಮಾಲಿನಿ ಸಿಟಿ ವಿಕ್ಷಣೆ ಮಾಡಿದರು. ಈ ವೇಳೆ ಆರ್ ಅಶೋಕ ಗೆ ಎಂಎಲ್ಸಿ ಸಿ.ಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ಅಭಯ ಪಾಟೀಲ ಸಾಥ್ ನೀಡೀದರು.‌ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 2400 ರೈತರು ಆತ್ಮಹತ್ಯೆ ಮಾಡಿಕ್ಕೊಂಡಿದ್ದಾರೆ. ಸರ್ಕಾರದ ಖಜಾನೆ ಖಾಲಿ ಖಾಲಿ ಆಗಿದೆ. ಕಾಂಗ್ರೆಸ್ ನವರು ಜಾಲಿ ಜಾಲಿ ಮಾಡುತ್ತಿದ್ದಾರೆ. ಇವರಿಗೆ ಅಧಿಕಾರದ ಮದ ಏರಿದೆ.‌ ಅವರಿವರ ಕಾಲು ಎಳೆದುಕೊಂಡು ನಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬನ್ನಿ ರೈತರ ಪರವಾಗಿ ನಿಲ್ಲಿ. ಇಲ್ಲ ಜಾಗ ಬಿಟ್ಟು ಕೊಡಿ ಎಂದು ಹೋರಾಟವನ್ನು ನಾವು ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಇದ್ದಾಗ ರೈತರ ಪರವಾಗಿ ಕೆಲಸವನ್ನು ಮಾಡಿದ್ದೇವೆ. ನಾವು ನಾಳೆ ರೈತರ ಪರವಾಗಿ ಧ್ವನಿ ಎತ್ತುತ್ತೇವೆ. ನಾನು ಬೆಳಿಗ್ಗೆ ನಿಲುವಳಿ ಸೂಚನೆ ಕೊಟ್ಟಿರುವ ಪ್ರಕಾರ ನಮ್ಮ ಒತ್ತಾಯದ ಮೇರೆಗೆ ಫ್ಲಡ್ ಪರಿಹಾರದ ಬಗ್ಗೆ ಅವಕಾಶ ಕೊಡಬೇಕು. ಇಲ್ಲದಿದ್ದರೆ ಸದನದಲ್ಲಿ ಹೋರಾಟ ಮಾಡುವ ಪರಿಸ್ಥಿತಿ ಎದುರಾಗುತ್ತೆ ಎಂದು ವಿಪಕ್ಷ ನಾಯಕ ಆರ್ ಅಶೋಕ ಎಚ್ಚರಿಕೆ ನೀಡಿದ್ದರು.

Home add -Advt

Related Articles

Back to top button