Belagavi NewsBelgaum NewsKannada NewsKarnataka NewsLatestPolitics
*ಹೊಸ ಬಿಪಿಎಲ್ ಕಾರ್ಡ್ ಅರ್ಜಿಗೆ ಅವಕಾಶ: ಸಚಿವ ಕೆ ಎಚ್ ಮುನಿಯಪ್ಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೊಸ ಬಿಪಿಎಲ್ ಕಾರ್ಡ್ ಕಳೆದ ತಿಂಗಳು 30 ರಿಂದ ಅರ್ಜಿಹಾಕಲು ಅವಕಾಶ ಕೊಟ್ಟಿದ್ದೇವೆ. ಅರ್ಹರಿಗೆ ಹೊಸ ಕಾರ್ಡ್ ಕೊಡ್ತಿದ್ದೇವೆ. 10ಲಕ್ಷ ಅನರ್ಹರನ್ನು ಎಪಿಎಲ್ಗೆ ಶಿಪ್ಟ್ ಮಾಡ್ತಿದ್ದೇವೆ ಎಂದು ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ ನೀಡಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಪಿಎಲ್ ಕಾರ್ಡ್ಗೆ ಮೊದಲು 15ಕೆಜಿ ಅಕ್ಕಿ ಕೊಡ್ತಿದ್ದೆವು ಅವರು ತೆಗೆದುಕೊಳ್ತಾ ಇರಲಿಲ್ಲ. ಹೀಗಾಗಿ ಅದನ್ನ ನಿಲ್ಲಿಸಿದ್ದೆವು,ಡಿಮ್ಯಾಂಡ್ ಬಂದರೆ ಕೊಡ್ತೇವೆ. ಒಂದು ವರ್ಷದಿಂದ ಅಕ್ಕಿ ತೆಗದುಕೊಳ್ಳದವರನ್ನು ಅಮಾನತು ಮಾಡಿದ್ದೇವೆ ಎಂದರು.
ಸಿಎಲ್ಪಿ ಸಭೆಯಲ್ಲಿನ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ನಿನ್ನೆ ಸಭೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗಿಲ್ಲ. ಅಭಿವೃದ್ಧಿಗಾಗಿ ಹಣವನ್ನು ಶಾಸಕರು ಕೇಳಿದ್ದಾರೆ, ಕೊಡೊದಾಗಿ ಹೇಳಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿ ಹಣ ಒದಗಿಸುತ್ತೇನೆಂದಿದ್ದಾರೆ. ಕ್ಯಾಬಿನೆಟ್ ರಿಶಪಲ್ ಬಗ್ಗೆ ಚರ್ಚೆ ಆಗಿಲ್ಲ, ಅದೆಲ್ಲಾ ಹೈಕಮಾಂಡ್ಗೆ ಬಿಟ್ಟಿದ್ದು ಎಂದರು.
