ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: 2014 ರಲ್ಲಿ ಪ್ರಧಾನಿ ಮೋದಿ ಪ್ರಧಾನಿಯಾದ ನಂತರ ಹಲವಾರು ಕ್ರಾಂತಿಕಾರಕ ಯೋಜನೆಗಳಿಗೆ ನಾಂದಿ ಹಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದ ಕೇಶವ ಕಲಾಭವನದಲ್ಲಿ ಭಾನುವಾರ ಸಂಜೆ ನಡೆದ ಪೌರತ್ವ ಕಾಯ್ದೆ 2019 ರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜನ್ ಧನ‌್ ಖಾತೆ ತೆರೆಯುವಾಗ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಸರಕಾರದ ಹಣ ನೇರವಾಗಿ ಫಲಾನುಭವಿಗಳಿಗೆ ಜಮಾ ಆಗುವ ಉದ್ದೇಶದಿಂದ ಇದನ್ನು ಪ್ರಾರಂಭಿಸಿದ್ದರು. ಪ್ರವಾಹ ಪೀಡಿತ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಿಡುಗಡೆಯಾದ 10 ಸಾವಿರ ಹಣ ನಗದು ಪ್ರವಾಹ ಪೀಡಿತ ಜನರಿಗೆ ನೇರವಾಗಿ ಮುಟ್ಟುವಂತಾಗಿದೆ ಎಂದರು.
ನೋಟ್ ಬ್ಯಾನ್ ನಿಂದ ದೇಶದ ಜನರಿಗೆ ತೊಂದರೆಯಾಗಿಲ್ಲ. ಸ್ವಂತ ದುಡಿಮೆಯಿಂದ ಜನರು ದೇಶದಲ್ಲಿ ಬದುಕುತ್ತಾ ಇದ್ದಾರೆ. ಅವರಿಗೆ ತೊಂದರೆಯಾಗುವದಿಲ್ಲ. ಪೌರತ್ವ ಕಾಯ್ದೆಯಿಂದ ಯಾವುದೆ ಒಂದು ಮುಸ್ಲಿಂ ಬಾಂಧವರಿಗೆ ತೊಂದರೆಯಾಗುವದಿಲ್ಲ ಎಂಬ ಭರವಸೆ ನೀಡುತ್ತೇನೆ ಎಂದರು.
ಇಡಿ ದೇಶದಲ್ಲಿಪೌರತ್ವ ಕಾಯ್ದೆ ಹೆಸರಿನಲ್ಲಿ ಅರಾಜಕತೆಯನ್ನು ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ. ದೇಶದ ಆಸ್ತಿ ಪಾಸ್ತಿ ಹಾನಿಯಾದರೆ ಅದು ದೇಶದ ನಾಗರಿಕರು ಕಟ್ಟಿದ ತೆರಿಗೆ ಹಣದ ಆಸ್ತಿ ಹಾನಿಯಾಗುತ್ತಿದೆ. ಧರ್ಮ ಧರ್ಮಗಳ ಮಧ್ಯದಲ್ಲಿ ವಿಷಬೀಜಬಿತ್ತುವ ಕಾರ್ಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು. ಪೌರತ್ವ ಕಾಯ್ದೆಯನ್ನು ಪ್ರತಿಯೊಂದು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುವಂತೆ ತಿಳಿಸಿದರು.
ಆರ್ ಎಸ್ ಎಸ್ ಮುಖಂಡ ಸಂಜಯ ಅಡಕೆ ಮಾತನಾಡಿ, ದೇಶದಲ್ಲಿನ ಎಲ್ಲಾ ಸಮಾಜ ಬಾಂಧವರು ಒಂದಾಗಬೇಕು ಎಂಬ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಉತ್ತಮವಾದ ಕಾರ್ಯ ಮಾಡುತ್ತಿದ್ದರೆ ಕೆಲವು ಎಡಪಂಥಿಯರು, ಕಾಂಗ್ರೆಸ್ ಹಾಗೂ ವಿರೋಧ ಪಕ್ಷದವರು ದೇಶದಲ್ಲಿ ಆರಾಜಕತೆವುಂಟು ಮಾಡಬೇಕೆಂದು ಬಯಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿಎಎ ಕಾನೂನು ಹೆಸರಿನಲ್ಲಿ ವಿರೋಧಿಗಳು ಅಶಾಂತತೆವುಂಟು ಮಾಡುವ ಕಾರ್ಯ ಮಾಡುತ್ತಿವೆ. ಈ ಹಿಂದೆ ಸಹ ಕಾಂಗ್ರೆಸ್ ಪಕ್ಷ ಹಲವಾರು ಬಾರಿ ಪೌರತ್ವ ಶಾಸನ ದೇಶದಲ್ಲಿ ತಿದ್ದುಪಡಿ ಮಾಡಿದೆ. ಅಲ್ಪಸಂಖ್ಯಾತರ ನಡುವೆ ಗೊಂದಲವುಂಟು ಮಾಡುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದರು.
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌಜನ್ಯ ನಡೆಯುತ್ತಿದೆ. ಈ ದೇಶದಲ್ಲಿ ಯಾವುದೆ ನಾಗರಿಕರು ಭಯಪಡುವ ಅಗತ್ಯವಿಲ್ಲ. ಈ ದೇಶದಲ್ಲಿನ ಮುಸ್ಲಿಂ ಬಂಧುಗಳನ್ನು ಯಾವುದೆ ಕಾರಣಕ್ಕೂ ಹೊರ ಹಾಕುವದಿಲ್ಲ. ಇಂತಹ ಭಯ ಹುಟ್ಟಿಸುವ ಕಾರ್ಯ ಕಾಂಗ್ರೆಸ್-ಎಡಪಕ್ಷಗಳು ನಿರಂತರವಾಗಿ ಮಾಡುತ್ತಿವೆ ಎಂದರು.
ದೇಶದೊಳಗಿನ ನುಸಳಕೋರರನ್ನು ಮಾತ್ರ ಭಾರತ ದೇಶದಿಂದ ಹೊರ ಹಾಕುವುದೆ ಈ ಶಾಸನ ಉದ್ದೇಶವಾಗಿದೆ. ಆದರೆ ದೇಶದ ಮುಸ್ಲಿಂರನ್ನಲ್ಲ. ಬಾಂಗ್ಲಾದೇಶದಿಂದ ಸುಮಾರು 3 ಕೋಟಿಗಿಂತ ಹೆಚ್ಚು ಜನರು ಭಾರತಕ್ಕೆ ನುಸಳಿದ್ದಾರೆ. ಅಂತಹ ನುಸುಳಕೋರರನ್ನು ದೇಶದಿಂದ ಹೊರ ಹಾಕಲಾಗುವದು ಎಂದರು.
ನ್ಯಾಯವಾದಿ ಐ.ಡಿ.ನಾಯಿಕವಾಡಿ ಮಾತನಾಡಿ, ಇಡಿ ವಿಶ್ವದಲ್ಲಿಯೇ ಭಾರತ ದೇಶದಲ್ಲಿ ಮುಸ್ಲಿಂರಿಗೆ ಇರುವಷ್ಟು ಸರಂಕ್ಷಣೆ ಇನ್ನೆಲ್ಲೂ ಇಲ್ಲ. ಇಸ್ಲಾಂ ರಾಷ್ಟ್ರಗಳು ಇಡಿ ಜಗತ್ತಿನಲ್ಲಿ ಹೊಡೆದಾಡುತ್ತಿವೆ. ಮುಸ್ಲಿಂ ಬಾಂಧವರಿಗೆ ಯಾವುದೆ ಧಕ್ಕೆಯಾಗುವದಿಲ್ಲ. ಸಾಮಾಜಿಕ ಜಾಲ ತಾಣದಲ್ಲಿ ವಿನಾಕಾರಣ ಕೆಲವರು ಸುಳ್ಳು ವದಂತಿ ಹರಡಿಸುವ ಕಾರ್ಯ ಮಾಡುತ್ತಿದ್ದಾರೆ. ಅದಕ್ಕೆ ಕಿವಿಗೊಡಬೇಡಿ ಎಂದರು.
ಕಾರ್ಯಕ್ರಮದಲ್ಲಿ ಮಹೇಶ ಭಾತೆ, ಸತೀಶ ಅಪ್ಪಾಜಿಗೋಳ, ಅಪ್ಪಾಸಾಹೇಬ ಚೌಗಲಾ, ಬಾಳಾಸಾಹೇಬ ಸಂಗ್ರೋಳಿ, ಎಸ್.ಎಸ್.ಕೌಲಾಪುರೆ, ಚೇ ತನ ಪಾಟೀಲ, ಎಸ್.ಎಂ.ಮುಲ್ಲಾ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ