*ಮೀಸಲಾತಿಯ ಅನುಸಾರ ನ್ಯಾಯಬೆಲೆ ಅಂಗಡಿಗಳ ಹಂಚಿಕೆಗೆ ಕ್ರಮ: ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಷ್ಟ್ರದಲ್ಲಿ ಪ್ರಪ್ರಥಮ ಬಾರಿಗೆ ನಮ್ಮ ರಾಜ್ಯ ಸರ್ಕಾರವು SC/ST ಸಮುದಾಯಗಳಿಗೆ ಆದ್ಯತೆ ಮೇರೆಗೆ ಮಿಸಲಾತಿ ಅನುಸಾರ ನ್ಯಾಯ ಬೆಲೆ ಅಂಗಡಿ ನೀಡಲು ತಿರ್ಮಾನಿಸಿ, ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಪ್ರಸ್ತುತ 20,463 ನ್ಯಾಯ ಬೆಲೆ ಅಂಗಡಿಗಳಿದ್ದು, ಅದರಲ್ಲಿ 918 ನ್ಯಾಯಬೆಲೆ ಅಂಗಡಿಗಳು ರದ್ದು ಆಗಿದ್ದು ಇವುಗಳನ್ನು ಹೊಸದಾಗಿ ಅಧಿಸೂಚನೆ ಮೂಲಕ ಕರೆಯಲು ಕ್ರಮವಹಿಸಲಾಗುತ್ತಿದೆ.
ಶಾಸಕರಾದ ಶರಣಗೌಡ ಕಂದಕೂರು ರವರು ಸದನದಲ್ಲಿ ಪ್ರಸ್ತಾಪಿಸಿದಂತೆ 5ರಿಂದ 6 ಗ್ರಾಮಗಳು ಸೇರಿ ಒಂದು ನ್ಯಾಯಬೆಲೆ ಅಂಗಡಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಫಲಾನುಭವಿಗಳಿಗೆ ಅನಾನುಕೂಲವಾತ್ತಿದೆ.
ಪ್ರಸ್ತುತ ರಾಜ್ಯದಲ್ಲಿರುವ 20,463 ನ್ಯಾಯ ಬೆಲೆ ಅಂಗಡಿಗಳಲ್ಲಿ ಸುಮಾರು 3000 ದಿಂದ 2000 ಪಡಿತರ ಚೀಟಿ ಹೊಂದಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚುವರಿ ಕಾರ್ಡಗಳನ್ನು ವೈಜ್ಞಾನಿಕವಾಗಿ ಮರು ವರ್ಗಿಕರಣ ಮಾಡಿದಾಗ ಸುಮಾರು 4600 ಹೊಸ ನ್ಯಾಯ ಅಂಗಡಿಗಳನ್ನು ಇನ್ನೂ ಸೃಜಿಸಬಹುದು.
ನ್ಯಾಯಬೆಲೆ ಅಂಗಡಿಗಳನ್ನು ಆ ಊರಿನ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಹೊಸ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಕ್ರಮವಹಿಸಲಾಗುವುದು.
2025-26ನೇ ಸಾಲಿನ ಆಯ-ವ್ಯಯ ಘೋಷಣೆಯಂತೆ 2016 PDS Controle orderಗೆ ತಿದ್ದುಪಡಿ ತಂದು SC/ST ಸಮುದಾಯದವರಿಗೆ ಆದ್ಯತೆ ನೀಡಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಈ ವಿಷಯದ ಕುರಿತು ಸರ್ಕಾರವು ಚಾಲ್ತಿಯಲ್ಲಿರುವ PDS Controle Order 2016 ನ್ನು ತಿದ್ದುಪಡಿ ಮಾಡಿ ದಿನಾಂಕ 14.11.2025 ರಂದು ತಿದ್ದುಪಡಿ ಆದೇಶವನ್ನು ಹೊರಡಿಸಿದ್ದು ಈ ಕುರಿತು ನ್ಯಾಯಬೆಲೆ ಅಂಗಡಿ ಹಂಚಿಕೆಯಲ್ಲಿ ಮೀಸಲಾತಿ ನೀತಿ ಅನುಸರಿಸಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಸಮಿತಿಯನ್ನು ದಿನಾಂಕ 17.11.2025 ರಂದು ರಚಿಸಿ ನಿರ್ದೇಶನ ನೀಡಲಾಗಿದೆ.
ಈಗ ರಾಜ್ಯದಲ್ಲಿರುವ ನ್ಯಾಯಬೆಲೆ ಅಂಗಡಿಗಳು = 20,463 ನ್ಯಾಯಬೆಲೆ ಅಂಗಡಿಗಳು ಮಾತ್ರ ಇವೆ. ಪ್ರಸ್ತುತ 24% ಪ್ರಕಾರ SC/ ST ಸಮುದಾಯದವರಿಗೆ 4,990 ನ್ಯಾಯಬೆಲೆ ಅಂಗಡಿಗಳು ಇರಬೇಕಾಗಿತ್ತು.
ಆದರೆ SC/ ST ಸೇರಿ 1473 ಮಾತ್ರ ಇದ್ದು ಇನ್ನೂ 3,517 ನ್ಯಾಯ ಬೆಲೆ ಅಂಗಡಿಗಳನ್ನು SC/ST ಸಮುದಾಯದ ಹೊಸ ನ್ಯಾಯ ಬೆಲೆ ಅಂಗಡಿಯನ್ನು ಅವಳಡಿಕೊಂಡು ಮಂಜೂರು ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸದಸ್ಯರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದರು.




