ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಅವನೇ ಶ್ರೀಮನ್ ನಾರಾಯಣ ಚಿತ್ರತಂಡ ಭಾನುವಾರ ರಾತ್ರಿ ಬೆಳಗಾವಿಗೆ ಆಗಮಿಸಿತ್ತು. ನಾಯಕ ನಟ, ನಿರ್ಮಾಪಕ, ನಿರ್ದೇಶಕ ರಕ್ಷಿತ್ ಶೆಟ್ಟಿ ಕಂಡು ಅಭಿಮಾನಿಗಳು ಪುಳಕಿತಗೊಂಡರು. ಅವರನ್ನು ಮುತ್ತಿದರು, ಕೈ ಕುಲುಕಲು ನುಗ್ಗಿದರು.
ರಕ್ಷಿತ್ ಶೆಟ್ಟಿ ಅಭಿಮಾನಿಗಳ ಕೈ ಕುಲುಕಿ, ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ರಕ್ಷಿತ್ ಶೆಟ್ಟಿ, ಚಿತ್ರ ಬಿಡುಗಡೆಯಾಗಿ 10 ದಿನಗಳಲ್ಲಿ ರೆಸ್ಪಾನ್ಸ್ ನೋಡಿ ತುಬಾ ಖುಷಿಯಾಗಿದೆ. ಹೊದಲ್ಲೆಲ್ಲ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳಿಗೆ ನಾವು ಚಿರಋಣಿಯಾಗಿರುತ್ತೇವೆ ಎಂದರು.
ಉತ್ತಮ ಪ್ರತಿಕ್ರಿಯೆ ಬರಬಹುದೆನ್ನುವ ನಿರೀಕ್ಷೆ ಇದ್ದರೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮಾಡಿರಲಿಲ್ಲ. ಎಷ್ಟು ಸಾಧ್ಯವೋ ಅಷ್ಟು ಊರುಗಳಿಗೆ ಹೋಗುವ ಪ್ರಯತ್ನ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕದ ಉತ್ತಮ ಕಥೆಯನ್ನು ಯಾರಾದರೂ ಕೊಟ್ಟರೆ ಸಿನೇಮಾ ಮಾಡಲು ಸಿದ್ಧ. ಇಲ್ಲಿಯೆ 2-3 ತಿಂಗಳು ಇದ್ದು ಇಲ್ಲಿಯ ಭಾಷೆ ಕಲಿತು ಪಾತ್ರ ನಿರ್ವಹಿಸಲು ಸಿದ್ಧನಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದರು.
ಸಂಪೂರ್ಣ ಕರ್ನಾಟಕದ ಭಾಷೆ, ವಿಷಯಗಳನ್ನು ಚಿತ್ರಗಳಲ್ಲಿ ಅಳವಡಿಸಬೇಕೆನ್ನುವುದು ನನ್ನ ಕನಸು. ಆಗಲೆ ಪರಿಪೂರ್ಣವಾಗಲಿದೆ. ಉತ್ತರ ಕರ್ನಾಟಕದ ಯಾವುದೇ ಸಮಸ್ಯೆಗಳಿಗೆ, ಹೋರಾಟಕ್ಕೆ ನನ್ನ ಸಹಕಾರವಿದೆ. ಇಲ್ಲಿಯ ರೆಸ್ಪಾನ್ಸ್ ನೋಡಿದರೆ ಮುಂದಿನ ದಿನಗಳಲ್ಲಿ ಇಲ್ಲಿಯೇ ಬಂದು ಸಿಲೆಬ್ರೇಶನ್ ಮಾಡಬೇಕೆನಿಸುತ್ತಿದೆ. ಇಲ್ಲಿಯಷ್ಟು ಉತ್ತಮ ಸೆಲೆಬ್ರೇಶನ್ ಎಲ್ಲಿಯೂ ಆಗುವುದಿಲ್ಲ ಎಂದೂ ಅವರು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ