Belagavi NewsBelgaum NewsKannada NewsKarnataka NewsLatest
*BREAKING: ಬೆಳಗಾವಿಯಲ್ಲಿ ಘೋರ ದುರಂತ: ಕಬ್ಬು ಕಟಾವು ಯಂತ್ರಕ್ಕೆ ಸಿಲುಕಿ ಇಬ್ಬರು ಕಾರ್ಮಿಕರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕಬ್ಬು ಬೆಳೆ ಕಟಾವು ಮಾಡುವ ವೇಳೆ ದುರಂತವೊಂದು ಸಂಭವಿಸಿದ್ದು, ಕಬ್ಬು ಕಟಾವು ಯಂತ್ರಕ್ಕೆ ಸಿಲುಕಿ ಇಬ್ಬರು ಮಹಿಳಾ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಬಾರವ್ವ ಕೋಬಡಿ (60) ಹಾಗೂ ಲಕ್ಷ್ಮೀಬಾಯಿ ರುದ್ರಗೌಡರ್ (65) ಮೃತ ದುರ್ದೈವಿಗಳು. ಕಬ್ಬಿನ ಗದ್ದೆಗೆ ಕೂಲಿ ಕೆಲಸಕ್ಕೆಂದು ಬಂದಿದ್ದರು. ಈ ವೇಳೆ ದುರಂತ ಸಂಭವಿಸಿದೆ.
ಕಬ್ಬು ಕಟಾವು ಯಂತ್ರ ಚಲಾಯಿಸುತ್ತಿದ್ದ ಚಾಲಕ ಮುಂದೆ ನೋಡದೇ ಯಂತ್ರವನ್ನು ಚಲಾಯಿಸಿದ್ದಾನೆ. ಯಂತ್ರಕ್ಕೆ ಸಿಲುಕಿದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನ ನಿರ್ಲಕ್ಷಕ್ಕೆ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ.




