Kannada NewsLatestWorld
*ನ್ಯಾಸ್ಕರ್ ಕಾರ್ ರೇಸ್ ಸ್ಟಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ: ಗ್ರೇಗ್ ಬೈಫಲ್ ಕುಟುಂಬ ಸಮೇತ 7 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಖಾಸಗಿ ವಿಮಾನ ವೊಂದು ಪತನಗೊಂಡು ನ್ಯಾಸ್ಕರ್ ಕಾರ್ ರೇಸ್ ಸ್ಟಾರ್ ಹಾಗೂ ಆತನ ಪತ್ನಿ, ಮಕ್ಕಳು ಸೇರಿ 7 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಈ ದುರಂತ ಸಂಭವಿಸಿಇದೆ. ನ್ಯಾಸ್ಕರ್ ಕಾರ್ ರೇಸ್ ಸ್ಟಾರ್ ಗ್ರೇಗ್ ಬೈಫಲ್, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ 7 ಜನರು ದುರಂತ ಅಂತ್ಯ ಕಂಡಿದ್ದಾರೆ.
ಖಾಸಗಿ ಹೆಲಿಕಾಪ್ಟರ್ ಅಪಘಾತದಲ್ಲಿ ಹೆಲಿಕಾಪ್ಟರ್ ಧಗಧಗನೆ ಹೊತ್ತಿ ಉರಿದಿದೆ. ವಿಮಾನ ಲ್ಯಾಂಡಿಂಗ್ ವೇಳೆ ಈ ದುರಂತ ಸಂಭವಿಸಿದೆ.


