Kannada NewsKarnataka NewsLatest

*ರೈಲು ಹತ್ತುವಾಗ ಅವಘಡ: ಯುವಕನ ಕೈ ಕಟ್*

ಪ್ರಗತಿವಾಹಿನಿ ಸುದ್ದಿ: ರೈಲು ಹತ್ತುವಾಗ ಎಷ್ಟೇ ಎಚ್ಚರವಹಿಸಿದರೂ ಕಡಿಮೆಯೇ. ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಯುವಕನೊಬ್ಬನ ಕೈ ಕಟ್ ಆಗಿ ಹಳಿ ಮೇಲೆ ಬಿದ್ದಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರೈಲು ನಿಲ್ದಾಣದಲ್ಲಿ ಈ ದುರಂತ ಸಂಭವಿಸ್ದೆ. ಯುವಕ ರೈಲು ಹತ್ತುವಾಗ ರೈಲಿಗೆ ಸಿಲುಕಿ ಆತನ ಕೈ ತುಂಡಾಗಿ ರೈಲಿನ ಹಳಿ ಮೇಲೆ ಬಿದ್ದಿದೆ. ಯುವಕನ ಸ್ಥಿತಿ ಕರುಳು ಹಿಂಡುವಂತಿದೆ.

ಚಿಕ್ಕಹೊಸಹಳ್ಳಿ ಗ್ರಾಮದ ಯುವಕ ಸಂದೀಪ್ ಎಂಬಾತ ರೈಲು ಹತ್ತಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ರೈಲು ಹತ್ತುವಾಗ ಈ ಅವಘಡ ಸಂಭವಿಸಿದ್ದು, ಯುವಕನ ಎಡಗೈ ತುಂಡಾಗಿ ಬಿದ್ದಿದೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

Related Articles

Back to top button