Belagavi NewsBelgaum NewsKannada NewsKarnataka NewsLatestNationalPolitics
*ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಅಧಿವೇಶನದ ಕೊನೆಯ ದಿನದಂದು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪರಿಶಿಷ್ಟ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಅಲೆಮಾರಿ ಸಮುದಾಯದಿಂದ ಒಳ ಮೀಸಲಾತಿಗಾಗಿ ಪ್ರತಿಭಟನೆ ನಡೆಸಲಾಯಿತು.
ಶುಕ್ರವಾರ ಬೆಳಗಾವಿಯ ಹಳೇ ಪಿ.ಬಿ ರಸ್ತೆಯ ಟೆಂಟ್ ನಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ರಾಜ್ಯದ 59 ಅಲೆಮಾರಿ ಸಮುದಾಯಗಳಿಗೆ ಪ್ರತ್ಯಕ ಶೇ.1% ರಷ್ಟು ಮೀಸಲಾತಿ ನೀಡಬೇಕು ಎಂದರು.
ಒಳ ಮೀಸಲಾತಿ ಕೊಡದೆ ನಮ್ಮ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಹಿಂದುಳಿದ ಸಮುದಾಯಕ್ಕೆ A ಗ್ರೂಪ್ ಕೊಡಬೇಕು.ನಮ್ಮ ಸಮುದಾಯದವರಿಗೆ A ವರ್ಗದಲ್ಲಿ ಗುರುತಿಸಿ 1% ಮೀಸಲಾತಿ ನೀಡಬೇಕು. ಸರ್ಕಾರ ನಮ್ಮ ಸಮುದಾಯಕ್ಕೆ C ವರ್ಗದಲ್ಲಿ ಸೇರಿಸಿ 5% ಕೊಡುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಸರ್ಕಾರ ಮರಣಶಾಸನ ಬರೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಅಲೆಮಾರಿ ಸಮುದಾಯದಿಂದ ಆಕ್ರೋಶ ಹೊರ ಹಾಕಲಾಯಿತು.




