*ಕ್ಯಾಪ್ಟನ್‌ಗಾಗಿ ಟಾಸ್ ಹಾಕಿದವರು ಅವರಿಬ್ಬರೇ, ನಾವೇನು ಹೇಳೊದು ಎಂದ ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ಯಾಪ್ಟನ್‌ಗಾಗಿ ಟಾಸ್ ಹಾಕಿದವರು ಅವರಿಬ್ಬರೇ, ಹೆಡ್ ಬಿದ್ದಿದೆಯೋ ಟೆಲ್ ಬಿದ್ದಿದೆಯೋ ಅವರನ್ನೇ ಕೇಳಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಪ್ಟನ್ ಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರು ಸೇರಿ ಟಾಸ್ ಮಾಡಿದ್ದಾರೆ. ಹೈ ಕಮಾಂಡ್ ಅವರಿಗೆ ಏನು ಹೇಳಿದೆ ಎಂದು ಅವರನ್ನೇ ಕೇಳಬೇಕು. ಟಾಸ್ ದೆಹಲಿಯ ಫಿರೋಜ್ ಶಾ ಮೈದಾನದಲ್ಲಿ ಆಗಿದೆ. ಟಾಸ್ ಮಾಡಿದವರು ಅವರಿಬ್ಬರು, ಹೀಗಿರುವಾಗ ಕ್ಯಾಪ್ಟನ್ ಬದಲಾವಣೆ ಹಾಗೂ ಹಳೇ ಕ್ಯಾಪ್ಟನ್ ಮುಂದುವರೆಯುವ ಕುರಿತು ಅವರನ್ನೇ ಕೇಳಬೇಕು ಎಂದರು.
ಡಿಕೆಶಿಗೆ ಹೈಕಮಾಂಡ್ ಕರೆ ಬಂದಿದೆ ಎಂಬ ವಿಚಾರ ಬಗ್ಗೆ ಮಾತನಾಡಿದ ಸಚಿವರು, ಅವರನ್ನೇ ಕೇಳಬೇಕು, ನಾವೇನು ಹೇಳೊದು. ಸದ್ಯ ನಾನು ಕ್ಯಾಪ್ಟನ್ ಜಾಗದಲ್ಲಿ ಇಲ್ಲ. ಮತ್ತೆ ಅವರಿಬ್ಬರೂ ಕ್ಯಾಪ್ಟನ್ಗಾಗಿ ಟಾಸ್ ಮಾಡುವಾಗ ಥರ್ಡ್ ಅಂಪೈರ್ ಇರಲಿಲ್ಲ. ಇಬ್ಬರೇ ಟಾಸ್ ಹಾಕಿದವರು, ಈ ಟಾಸ್ ವಿಚಾರ ಅವರಿಬ್ಬರಿಗೇ ಗೊತ್ತು, ಅದನ್ನ ಅವರನ್ನೇ ಕೇಳಬೇಕು ಎಂದರು.



