*ರಾಕಸಕೊಪ್ಪ ಗ್ರಾಮದ ರಸ್ತೆ ನಿರ್ಮಾಣಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ*

ಪ್ರಗತಿವಾಹಿನಿ ಸುದ್ದಿ: ರಾಕಸಕೊಪ್ಪ ಗ್ರಾಮದಲ್ಲಿ ಸುಮಾರು 70 ಲಕ್ಷ ರೂ.ಗಳ ವೆಚ್ಚದ ಗ್ರಾಮದೊಳಗಿನ ರಸ್ತೆಗಳ ನಿರ್ಮಾಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಗ್ರಾಮದ ದಶಕಗಳ ಕಾಲದ ರಸ್ತೆಯ ಸಮಸ್ಯೆಗೆ ಈಗ ಮುಕ್ತಿ ಸಿಕ್ಕಂತಾಗಿದೆ. ಗ್ರಾಮದ ಪ್ರಮುಖ ಭಾಗಗಳಲ್ಲಿ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ಹಾಗೂ ನಿಗದಿತ ಅವಧಿಯೊಳಗೆ ರಸ್ತೆ ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ಬಾಹುಕು ಮಾಸೆಕರ್, ಬಾಳು ದೇಸೂರಕರ್, ಮನೋಹರ್ ಬೆಳಗಾಂವ್ಕರ್, ಮಹೇಶ ಪಾಟೀಲ, ನಿಂಗಪ್ಪ ಮೋರೆ, ಡಾಕಲು ಪಾಟೀಲ, ಶಿವಾಜಿ ಬೊಕಡೆ, ಲಕ್ಷ್ಮೀ ಪಾಟೀಲ, ಪೂಜಾ ಸುತಾರ, ಗಾಯತ್ರಿ ಸುತಾರ, ಕಾಶಿನಾಥ ಮೋರೆ ಮಂಜುಳಾ ಕಾಂಬಳೆ, ಶ್ರೀಕಾಂತ ಪಾಟೀಲ, ಜಯವಂತ ಮೋರೆ, ಪರಶುರಾಮ ಕೀಣೆಕರ್, ಅರುಣ ಪಾಟೀಲ, ಗುಂಡು ಪಾಟೀಲ, ಡಿ.ಎಚ್ ಮಾಳಗಿ, ರವಿಕಾಂತ ಪಿಡಿಒ ಉಪಸ್ಥಿತರಿದ್ದರು.




