Kannada NewsKarnataka NewsPolitics

*ಲಿಫ್ಟ್ ನಲ್ಲಿ ಸಿಲುಕಿದ ಡಿಸಿಎಂ ಡಿ.ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಶಾಂತಿ ನಗರದಲ್ಲಿರುವ ‘ನಮ್ಮ ಮೆಟ್ರೋ’ ಪ್ರಧಾನ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಈ ಸಭೆಗೆ ಆಗಮಿಸುವ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ಲಿಫ್ಟ್‌ನೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ. 

ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಲಿಫ್ಟ್ ಬಾಗಿಲನ್ನು ಹೊರಗಿನಿಂದಲೇ ತೆರೆದು ಒಳಗೆ ಸಿಲುಕಿಕೊಂಡಿದ್ದ ಡಿ.ಕೆ.ಶಿವಕುಮಾ‌ರ್ ಮತ್ತು ಇತರರು ಹೊರಗೆ ಬರಲು ಸಹಕರಿಸಿದರು. ಘಟನೆಯ ವಿಡಿಯೋ ಬೆಳಕಿಗೆ ಬಂದಿದೆ.

ಮೆಟ್ರೋ ಅಭಿವೃದ್ಧಿ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾ‌ರ್ ಬಿಎಂಆರ್‌ಸಿಎಲ್ ಅಧಿಕಾರಿಗಳ ಜೊತೆ ಸಭೆ ನಡೆದಿದೆ. ಈ ವೇಳೆ BMRCL ಕಚೇರಿಗೆ ಬರುವಾಗ ಅಧಿಕಾರಿಗಳ ಜೊತೆ ಬರುವಾಗ ಲಿಫ್ಟ್ ಕೈಕೊಟ್ಟಿದೆ. ಅಧಿಕಾರಿಗಳು ಹಾಗೂ ಡಿಸಿಎಂ ಇದ್ದ ಲಿಫ್ಟ್ ಬಾಗಿಲು ಸುಮಾರು 20 ಸೆಕೆಂಡ್ ಓಪನ್ ಆಗದೇ ಸ್ತಬ್ಧವಾಗಿತ್ತು ಎನ್ನಲಾಗಿದೆ.

ಹೊರಗಿದ್ದ ಅಧಿಕಾರಿಗಳು ಒಂದು ಕ್ಷಣ ಕಂಗಾಲಾಗಿದ್ದಾರೆ. ಬಳಿಕ ಅಲ್ಲೇ ಇದ್ದ ಸೆಕ್ಯೂರಿಟಿ ಲಿಫ್ಟ್ ಬಾಗಿಲು ಓಪನ್ ಮಾಡಿದ್ದಾರೆ. ಈ ವೇಳೆ ಮುಳುಗು ನಗುತ್ತಲೇ ಡಿಕೆಶಿ ಲಿಫ್ಟ್‌ನಿಂದ ಅಧಿಕಾರಿಗಳ ಜೊತೆ ಆಚೆ ಬಂದರು.

Home add -Advt

Related Articles

Back to top button