*ಬೆಳಗಾವಿ ಪೊಲೀಸರ ದಾಳಿ: ಮಟ್ಕಾ ಆಡುತ್ತಿದ್ದ ನಾಲ್ವರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಹಳೇ ಬಾಜಿ ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮುಂಬೈ ಅಂಕಿ ಸಂಖ್ಯೆಗಳ ಮೇಲೆ ಹಣ ಹಚ್ಚಿ ಓಸಿ/ಮಟಕಾ ಎಂಬ ಆಟ ಆಡುವಾ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದಿದ್ದಾರೆ.
ಮಾರ್ಕೆಟ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಸಾಧಿಕ ಹಸೀಮ ಹಾಜಿ, ಶಮಶೇರ ಅಲ್ಲಾಭಕ್ಷ ಪೀರಜಾದೆ, ಪಂಕಜ ಮೋಹನ ಜಾಧವ ಎಂಬ ಆರೋಪಿಗಳನ್ನು ಬಂಧಿಸಿ ರೂ.2,250/- ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಚೀಟಿಗಳನ್ನು ಜಪ್ತಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.261/2025 ಕಲಂ.78(iii) ಕೆ. ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.
ಶಹಾಪೂರ ಠಾಣೆ ಪೊಲೀಸರಿಂದ ಮಟಕಾ ಆಡುವವನ ಮೇಲೆ ದಾಳಿ
ಭರತ ರಾಜು ಅಪ್ಪುಗೋಳ ಎಂಬಾತ ಸಾರ್ವಜನಿಕ ಸ್ಥಳದಲ್ಲಿ ಮುಂಬೈ ಮಟಕಾ ಎಂಬ ಅಂಕಿ ಸಂಖ್ಯೆಗಳ ಮೇಲೆ ಹಣ ಹಚ್ಚಿ ಓಸಿ/ಮಟಕಾ ಎಂಬ ಆಟ ಆಡವಾಗ ಶಹಾಪೂರ ಪೊಲೀಸರು ಬಂಧಿಸಿದ್ದಾರೆ.
ಈ ದಾಳಿಯಲ್ಲಿ ಆರೋಪಿತನಿಂದ ರೂ.1450/- ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಚೀಟಿಗಳನ್ನು ಜಪ್ತಪಡಿಸಿಕೊಂಡು ಅವನ ವಿರುದ್ಧ ಶಹಾಪೂರ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.131/2025 ಕಲಂ.78(iii) ಕೆ. ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.


