CrimeKannada NewsKarnataka NewsNationalPoliticsTravelWorld

*ಚಿತ್ರದುರ್ಗ ದುರಂತಕ್ಕೆ ಮೋದಿ ಸಂತಾಪ: 2 ಲಕ್ಷ ಪರಿಹಾರ ಘೋಷಣೆ*

ಪ್ರಗತಿವಾಹಿನಿ ಸುದ್ದಿ:  ಚಿತ್ರದುರ್ಗದಲ್ಲಿ ಖಾಸಗಿ ಟ್ರಾವೆಲ್ಸ್ ಬಸ್ ಗೆ ಟ್ರಕ್ ಡಿಕ್ಕಿಯಿಂದ ಬೆಂಕಿಗಾಹುತಿಯಾಗಿ ಪ್ರಯಾಣಿಕರು ಸಜೀವ ದಹನಗೊಂಡು 9 ಜನ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡ ಭೀಕರ ದುರಂತ ಸಂಭವಿಸಿದೆ.

ಈ ದುರಂತಕ್ಕೆ ಪ್ರಧಾದಿ ಮೋದಿ ಸಂತಾಪ ಸೂಚಿಸಿದ್ದು, ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ “ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಿಂದ ಜೀವಹಾನಿಯಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ.ಮೃತರ ಸಂಬಂಧಿಕರಿಗೆ PMNRF ನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು” ಎಂದು ತಿಳಿಸಿದ್ದಾರೆ.

Home add -Advt

Related Articles

Back to top button