Kannada NewsKarnataka NewsLatest
*ಗರ್ಭಿಣಿ ಮಗಳನ್ನೇ ತಂದೆ ಹತ್ಯೆಗೈದ ಪ್ರಕರಣ: ಇಬ್ಬರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಗರ್ಭಿಣಿ ಮಗಳನ್ನು ತಂದೆಯೇ ಬರ್ಬರವಾಗಿ ಹತ್ಯೆ ಮಾಡಿದ್ದ ಮರ್ಯಾದೆಗೇಡು ಕೊಲೆ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಕಾನ್ಸ್ ಟೇಬಲ್ ಸಂಗಮೇಶ್ ಸಾಗರ್ ಹಾಗೂ ಬೀಟ್ ಕಾನ್ಸ್ ಟೇಬಲ್ ಚಂದ್ರಕಾಂತ್ ರಾಠೋಡ್ ಸಸ್ಪೆಂಡ್ ಆದವರು.
ಧಾರವಾಡ ಎಸ್ ಪಿ ಗುಂಜನ್ ಆರ್ಯ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಅನ್ಯಜಾತಿಯ ಯುವಕನನ್ನು ಮಗಳು ಮದುಯೆಯಾಗಿದ್ದಕ್ಕೆ ಕೋಪಗೊಂಡಿದ್ದ ತಂದೆ ಗರ್ಭಿಣಿ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ. ಪ್ರಕರಣ ಸಂಬಂಧ ಎಅಮ್ಟು ಜನರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.



