*ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್: ಪತಿಯೂ ಆತ್ಮಹತ್ಯೆಗೆ ಶರಣು*

ಅತ್ತೆಯಿಂದಲೂ ಆತ್ಮಹತ್ಯೆಗೆ ಯತ್ನ
ಪ್ರಗತಿವಾಹಿನಿ ಸುದ್ದಿ: ಪತಿ ಮನೆಯವರ ವರದಕ್ಷಿಣೆ ಕಿರುಕುಳ, ಧನದಾಹಕ್ಕೆ ಮನನೊಂದು ನವವಿವಾಹಿತೆ ಗಾನವಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಮತ್ತೊಂದು ತಿರುವು ಪಡೆದಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಗಾನವಿ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗಾನವಿ ಆತ್ಮಹತ್ಯೆಗೆ ಯತ್ನಿಸಿ ಬ್ರೇನ್ ಡೆಡ್ ಆಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರು, ಸಂಬಂಧಿಕರು ಹಾಗೂ ರಾಮಮೂರ್ತಿ ನಗರ ನಿವಾಸಿಗಳು ಸೂರಜ್ ಮನೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಮಗಳ ಅಂತ್ಯಸಂಸ್ಕಾರ ಆತನೇ ನೆರವೇರಿಸುವಂತೆ ಒತ್ತಾಯಿಸಿದ್ದರು. ಸೂರಜ್ ಹಾಗೂ ಆತನ ತಾಯಿ ಜಯಂತಿ ವಿರುದ್ಧ ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಹಲವು ಪ್ರಕರಣ ದಾಖಲಾಗುತ್ತಿದ್ದಂರೆ ತಾಯಿ ಹಾಗೂ ಮಗ ನಾಗಪುರಕ್ಕೆ ಎಸ್ಕೇಪ್ ಆಗಿ ತಲೆಮರೆಸಿಕೊಂಡಿದ್ದರು.
ನಾಗಪುರದಲ್ಲಿ ಲಾಡ್ಜ್ ವೊಂದರಲ್ಲಿ ರೂಮು ಪಡೆದಿದ್ದ ತಾಯಿ ಮಗ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸೂರಜ್ ಸಾವನ್ನಪ್ಪಿದ್ದು, ತಾಯಿ ಜಯಂತಿ ಸ್ಥಿತಿ ಗಂಭೀರವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
58ದಿನಗಳ ಹಿಂದಷ್ಟೇ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ನವವಿವಾಹಿತೆ ಗಾನವಿ ಪತಿಯ ವರದಕ್ಷಿಣೆ ಕಿರುಕುಳ, ಅವಮಾನಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಮಮೂರ್ತಿ ನಗರದಲ್ಲಿ ನಡೆದಿತ್ತು.
ಕೆಲ ದಿನಗಳ ಹಿಂದಷ್ಟೇ ಗಾನವಿ, ಸೂರಜ್ ಎಂಬಾತನ ಜೊತೆ ವಿವಾಹವಾಗಿದ್ದರು. ಎರಡೂ ಕುಟುಂಬಗಳು ನೋಡಿಯೇ ಮಾಡಿದ್ದ ಮದುವೆ. ಸೂರಜ್ ಮನೆಯವರ ಬೇಡಿಕೆಯಂತೆ ಲಕ್ಷ ಲಕ್ಷ ಹಣ, ಚಿನ್ನಾಭರಣ ಕಿಟ್ಟು ಮದುವೆ ಮಾಡಲಾಗಿತ್ತು. ಅಲ್ಲದೇ ಸೂರಜ್ ಬೇಡಿಕೆಯಂತೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನೂಗಾನವಿ ತಂದೆ-ತಾಯಿ ನೆರವೇರಿಸಿದ್ದರು. ಹೀಗೆ ಭರ್ಜರಿಯಾಗಿ ವಿವಾಹವಾದ ವರಮಹಾಶಯನಿಗೆ ವರದಕ್ಷಿಣೆಯ ದಾಹ ಕಡಿಮೆಯಾಗಿಲ್ಲ. ಆತನ ತಾಯಿ ಹಾಗೂ ಸಹೋದರನೂ ಇದಕ್ಕೆ ಸಾಥ್ ನೀಡಿದ್ದಾರೆ.
ನವದಂಪತಿ ಹತ್ತು ದಿನಗಳ ಕಾಲ ಶ್ರೀಲಂಕಾಗೆ ಹನಿಮೂನ್ ಟ್ರಿಪ್ ಹೋಗಿದ್ದರು. ವರದಕ್ಷಿಣೆ ವಿಚಾರವಾಗಿ ಸೂರಜ್ ಅಲ್ಲಿಯೂ ಗಲಾಟೆ ಮಾಡಿದ್ದಾನೆ. ನವದಂಪತಿ ನಡುವೆ ಜಗಳವಾಗಿ ಹತ್ತುದಿನದ ಹನಿಮೂನ್ ಟ್ರಿಪ್ ಅರ್ಧಕ್ಕೆ ನಿಲ್ಲಿಸಿ 5 ದಿನಕ್ಕೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ವಾಪಸ್ ಆಗುತ್ತಿದ್ದಂತೆಯೇ ಗಾನವಿ ಪೋಷಕರಿಗೆ ಕರೆ ಮಾಡಿದ ಸೂರಜ್ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಆವಾಜ್ ಹಾಕಿದ್ದಾನೆ. ಮನೆಗೆ ಬಂದವರಿಗೆ ಅವಮಾನ ಮಾಡಿ, ವರದಕ್ಷಿಣೆ ಬಗ್ಗೆ ಮತ್ತೆ ಬೇಡಿಕೆ ಇಟ್ಟಿದ್ದಾನೆ. ಪತಿ ಹಾಗೂ ಆತನ ಮನೆಯವರ ವರ್ತನೆ, ವರದಕ್ಷಿಣೆ ಕಿರುಕುಳಕ್ಕೆ ನೊಂದಗಾನವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದು ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ವೈದ್ಯರು ಗಾನವಿ ಬ್ರೇನ್ ಡೆಡ್ ಆಗಿದೆ ಎಂದು ತಿಳಿಸಿದ್ದರು. ಚಿಕಿತ್ಸೆ ಮುಂದುವರೆದಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಗಾನವಿ ಕೊನೆಯಿಸಿರೆಳೆದಿದ್ದಾಳೆ. ಗಾನವಿ ಸಾವಿನ ಬೆನ್ನಲ್ಲೇ ಸೂರಜ್ ಮನೆ ಮುಂದೆ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಸೂರಜ್ ಹಾಗೂ ಆತನ ತಾಯಿ, ಅಣ್ಣನನ್ನು ಬಂಧಿಸುವಂತೆ ಆಗ್ರಹಿಸಲಾಗಿತ್ತು. ಘಟನೆಯಿಂದ ತಲೆಮರೆಸಿಕೊಂಡಿದ್ದ ಸೂರಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ.




