*ಜೊಲ್ಲೆ ಕುಟುಂಬ ಸದಾ ಸಮಾಜಸೇವೆಯಲ್ಲಿ ತೊಡಗಿರುತ್ತದೆ: ಅಥಣಿಯ ಪ್ರಭುಚನ್ನಬಸವ ಸ್ವಾಮಿಜಿ ಅಭಿಮತ*

ಪ್ರಗತಿವಾಹಿನಿ ಸುದ್ದಿ: ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರುಪ್ ವತಿಯಿಂದ 4 ದಿನಗಳರವರೆಗೆ ಜರುಗುತ್ತಿರುವ 14ನೇ ಪ್ರೇರಣಾ ಉತ್ಸವದ ಅಂಗವಾಗಿ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಥಣಿಯ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮಿಜಿಗಳು ಉದ್ಘಾಟಿಸಿದರು.
ಸಂದೇಶ, ಧರ್ಮ, ಚಿಂತನೆ, ನಿಸ್ವಾರ್ಥ ಸಾಮಾಜಿಕ ಸೇವೆ ನಿರಂತರ ನಡೆಯಬೇಕು,ಭಗಂವತನು ಅಧಿಕಾರ ಮತ್ತು ಶ್ರೀಮಂತಿಗೆ ಕೊಟ್ಟಾಗ ಸಮಾಜಸೇವೆ ಮಾಡಬೇಕು ಅಂದಾಗ ಭಗವಂತನು ನಿಮಗೆ ಒಲಿಯುತ್ತಾನೆ ಎಂದು ಅಥಣಿಯ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮಿಜಿಗಳು ಹೇಳಿದರು.
ಜೊಲ್ಲೆ ಗ್ರುಪ್ ವತಿಯಿಂದ ನಡೆಯುತ್ತಿರುವ ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಪಬ್ಲಿಕ ಶಾಲೆ(ಸಿ.ಬಿ.ಎಸ್.ಇ) ನಣದಿ ಕ್ಯಾಂಪಸ್‌ನಲ್ಲಿ 14ನೇ ಪ್ರೇರಣಾ ಉತ್ಸವದ ಅಂಗವಾಗಿ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು.
ಜೋಡಕುರಳಿಯ ಶ್ರೀ ಸಿದ್ದಾರೂಢ ಮಠದ ಶ್ರೀ ಚಿದ್ವಾನಾನಂದ ಮಹಾಸ್ವಾಮಿಜಿಗಳು ಮಾತನಾಡಿ, ಜೊಲ್ಲೆ ದಂಪತಿಗಳು ಪ್ರತಿ ವರ್ಷ ಪ್ರೇರಣಾ ಉತ್ಸವ ಏರ್ಪಡಿಸಿ ಪ್ರೇರಣೆ ಕೊಡುವ ಅಪರೂಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರದರಿಂದ ಜೊಲ್ಲೆ ಜಾತ್ರೆಯಾಗಿ ಪರಿಣಮಿಸುತ್ತಿದ್ದು, ಪ್ರತಿಯೊಬ್ಬರು ಭಗವಂತನ ಪರೀಕ್ಷೆಯಲ್ಲಿ ಫೇಲಾಗಬಾರದು,ಬಂದದನ್ನು ಸ್ವೀಕರಿಸಿ ಮುನ್ನಡೆಯಬೇಕು ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 14ನೇ ಪ್ರೇರಣಾ ಉತ್ಸವವನ್ನು 4 ದಿನಗಳ ಕಾಲ ಆಚರಿಸುತ್ತಿದ್ದು, ಉತ್ಸವದ ಅಂಗವಾಗಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಜೊತೆಗೆ ಮಹಿಳಾ ಸಬಲಿಕರಣ ಹಾಗೂ ಮಹಿಳೆಯರಿಗಾಗಿ ರಂಗೋಲಿ ಮತ್ತು ಸಾಂಪ್ರದಾಯಿಕ ಉಡುಗೆ ಸ್ಪರ್ಧೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳು, ಸಂಸ್ಕೃತಿಕ ಕಾರ್ಯಕ್ರಮಗಳು, ಪ್ರೇರಣಾ ಪುರಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೊಲ್ಲೆ ಗ್ರುಪ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ,ಆಶಾಜ್ಯೋತಿ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಸೇರಿದಂತೆ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು,ಸದ್ಯಸರು,ಅಧಿಕಾರಿಗಳು ವಿವಿಧ ಅಂಗಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

