
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಸವಕಲ್ಯಾಣ ಬಿಜೆಪಿ ಶಾಸಕರಾಗಿರುವ ಶರಣು ಸಲಗರ ವಿರುದ್ಧ ಉದ್ಯಮಿಯೊಬ್ಬರು ದೂರು ನೀಡಿದ್ದಾರೆ.
ಚೆಕ್ ಬೌನ್ಸ್ ಕೇಸ್ ಗೆ ಸಂಬಂಧಿಸಿದಂತೆ ಶಾಸಕ ಶರಣು ಸಲಗರ ವಿರುದ್ಧ ಬೀದರ್ ಜಿಲ್ಲೆಯ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಉದ್ಯಮಿ ಸಂಜೀವ್ ಕುಮಾರ್ ಸುಗುರೆ ಎಂಬುವರಿಂದ ಶರಣು ಸಲಗರ, ವಿಧಾನಸಭೆ ಚುನಾವಣೆ ವೇಳೆ 99 ಲಕ್ಷ ರೂಪಾಯಿ ಹಣ ಪಡೆದಿದ್ದರಂತೆ. ಹಣ ಪಡೆದ ವೇಳೆ ಶಾಸಕರು ಭದ್ರತೆಗಾಗಿ ತನ್ನ ಬಳಿ ಇದ್ದ ಖಾಲಿ ಚೆಕ್ ನೀಡಿದ್ದರು. ನಿಗದಿತ ಅವಧಿಯಲ್ಲಿ ಶರಣು ಸಲಗರ ಹಣ ವಾಪಸ್ ಕೊಡುವಂತೆ ಕೇಳಿದರೂ ಕೊಟ್ಟಿಲ್ಲ ಎನ್ನಲಾಗಿದೆ.. ಇದರಿಂದ ಉದ್ಯಮಿ ತನ್ನ ಬಳಿ ಇದ್ದ ಚೆಕ್ ನ್ನು ಬ್ಯಾಂಕ್ ಗೆ ಸಲ್ಲಿಸಿದ್ದಾರೆ. ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿದ್ದು, ಉದ್ಯಮಿ ಸಂಜೀವ್ ಕುಮಾರ್, ಶಾಸಕ ಶರಣು ಸಲಗರ ವಿರುದ್ಧ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಎಫ್ ಐಆರ್ ದಾಖಲಾಗಿದೆ.




