
ಪ್ರಗತಿವಾಹಿನಿ ಸುದ್ದಿ: 8 ಎಕರೆ ಭೂಕಬಳಿಕೆ ಆರೋಪದಲ್ಲಿ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಓರ್ವರನ್ನು ಸೇವೆಯಿಂದ ಅಮಾನತು ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ಮಾಚೇನಹಳ್ಳಿಯಲ್ಲಿ 8 ಎಕರೆ ಭೂಕಬಳಿಕೆ ಮಾಡಿದ ಆರೋಪದಲ್ಲಿ ನೆಲಮಂಗಲ ಠಾಣೆ ಹೆಡ್ ಕಾನ್ಸ್ ಟೇಬಲ್ ಗಿರಿಜೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಪ್ರಕರಣ ಸಂಬಂಧ ಕಾನ್ಸ್ ಟೇಬಲ್ ಗಿರಿಜೇಶ್ ಸೇರಿ ಆರು ಜನರ ವಿರುದ್ಧ ನೆಲಮಂಗಲದ ಡಾಬಸ್ ಪೇಟೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿಕೆ ಬಾಬಾ ಗಿರಿಜೇಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರದಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಆರಂಭವಾಗಿದೆ.


