Belagavi NewsBelgaum NewsKannada NewsKarnataka NewsPolitics

*ಆಧುನಿಕತೆಯ ಮಧ್ಯೆ ನಡೆಯುವ ಜಾತ್ರೆ   ಸಂಸ್ಕೃತಿ ಉಳಿಸಲು ಸಹಕಾರಿ: ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ: ಆಧುನಿಕತೆಯ ಅಬ್ಬರದ ಮಧ್ಯೆಯೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಬುಧವಾರ ಡಿ-31 ರಂದು ತಾಲೂಕಿನ ಗುಜನಟ್ಟಿ ಗ್ರಾಮದ ನಿಂಗಮ್ಮಾದೇವಿ ಹಾಗೂ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು ತದನಂತರ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಲ್ಲಿ  ನಿರ್ಮಾಣಗೊಂಡ ಸಮುದಾಯ ಭವನದ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.

ಸಮಾಜ ವೈಜ್ಞಾನಿಕವಾಗಿ ಬದಲಾದಂತೆ ಸಂಸ್ಕೃತಿ ಮತ್ತು ಸಂಸ್ಕಾರವೂ ಬದಲಾಗುತ್ತಿದೆ. ಇದು ಸಮಾಜಕ್ಕೆ ಮಾರಕವಾಗುವ ಲಕ್ಷಣಗಳಿದ್ದು, ಗ್ರಾಮೀಣ ಸೊಗಡಿನ ರೈತರು ತನ್ನ ಹಿಂದಿನ ಆಚಾರ-ವಿಚಾರ, ಆಧ್ಯಾತ್ಮಿಕ ಮೌಲ್ಯಗಳನ್ನು ಈಗಿನ ಯುವಕರಿಗೆ ಹೇಳಿಕೊಡಬೇಕಾದ ಅವಶ್ಯಕತೆ ಇದೆ ಎಂದರು. 

ಕಳೆದ 5 ವರ್ಷಗಳಲ್ಲಿ ನಾನು ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ 10 ಕೋಟಿಗೂ ಅಧಿಕ ರಾಜ್ಯಸಭಾ ಸಂಸದರ ಅನುದಾನವನ್ನು ವಿನಿಯೋಗ ಮಾಡಿದ್ದೇನೆ.  ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ದಿ ಕಾರ್ಯಗಳಿಗೆ ನನ್ನ ಸಹಕಾರ ಇದ್ದೇ ಇರುತ್ತದೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.

Home add -Advt

ಈ ಸಂದರ್ಭದಲ್ಲಿ ಗುರು ಗಂಗಣ್ಣವರ, ಶಂಭುಲಿಂಗ ಮುಕ್ಕನ್ನವರ, ಭೀಮಪ್ಪ ಬಂಡಿನವರ, ಪಾವಡೆಪ್ಪ ಕುರಿಬಾಗಿ, ಶಿವಪುತ್ರ ಬಂಡಿನವರ, ಸಿದ್ದಾರೂಢ ಗುಮಚನಮರಡಿ, ಮುತ್ತೇಪ್ಪ ಅಜ್ಜನ್ನವರ, ವಿಠ್ಠಲ ಮುಕ್ಕನ್ನವರ, ಬಸು ಶಿರಗನ್ನವರ, ನಾಗಪ್ಪ ಆಲಗೂರ, ಈರಪ್ಪ ಡವಳೇಶ್ವರ, ಬಸವರಾಜ ಗಾಡವಿ, ಈಶ್ವರ ಗಾಡವಿ, ಗುರು ಪಾಟೀಲ, ಮಾರುತಿ ಹಡಪದ, ನಿಂಗಪ್ಪ ಬಂಡ್ರೋಳಿ, ಭೀಮಪ್ಪ ಗೌಡ್ರ, ಬಾಲಪ್ಪ ಬ್ಯಾಕೂಡ ಸೇರಿದಂತೆ ಸ್ಥಲೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Back to top button