Belagavi NewsBelgaum NewsHealthKannada NewsKarnataka News

*ಕೆಎಲ್ ಇ ಆಸ್ಪತ್ರೆಯಲ್ಲಿ ಅತಿದೊಡ್ಡ ಥೈರಾಯಿಡ್ ಗಂಟಿನ ಶಸ್ತ್ರಚಿಕಿತ್ಸೆ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸುಮಾರು ೬೭ ವರ್ಷದ ವೃದ್ದೆಗೆ ಕಾಡುತ್ತಿದ್ದ ದೊಡ್ಡ ಥೈರಾಯಿಡ್ ಗಂಟಿಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ.

ಕಿವಿ, ಗಂಟಲು ಹಾಗೂ ಮೂಗಿನ ಶಸ್ತ್ರಚಿಕಿತ್ಸಕ ಡಾ. ವಿವೇಕಾನಂದ ಕೊಳ್ವೆಕರ ಹಾಗೂ ತಂಡದವರು ಶಸ್ತ್ರ ಚಿಕಿತ್ಸೆ ನರವೇರಿಸಿದರು.. ೮ ತಿಂಗಳಿನಿಂದ ಬಳಲುತ್ತಿದ್ದ ರೋಗಿಯು ವಿವಿಧ ವೈದ್ಯರ ಬಳಿ ಚಿಕಿತ್ಸೆ ಪಡೆದು ಕೊನೆಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಹೊಂದುವ ಮೂಲಕ ನವಜೀವನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಿವೇಕಾನಂದ ಕೊಳ್ವೆಕರ ಅವರು, ರೋಗಿಯು ನಮ್ಮಲ್ಲಿ ಬಂದಾಗ ಆಕೆಯ ಗಂಟಲು ಅತಿಯಾಗಿ ಊದಿಕೊಂಡಿತ್ತು, ಸೋನೊಗ್ರಾಫಿ ಪರೀಕ್ಷೆ ಮಾಡಲಾಗಿ ಆಕೆಯ ಗಂಟಲಿನಲ್ಲಿ ಸುಮಾರು ೧೨ ರಿಂದ ೧೫ ಸೆ ಮೀ ಗಾತ್ರದ ಥೈರಾಯಿಡ್ ಗಂಟು ಆಕೆಯ ಅನ್ನ ನಳಿಕೆ ಹಾಗೂ ಶ್ವಾಸನಾಳದ ನಳಿಕೆಗಳನ್ನು ಮತ್ತಿತರೆ ರಕ್ತನಾಳಗಳನ್ನು ಒತ್ತುವ ಮೂಲಕ ರೋಗಿಯು ಸರಿಯಾದ ಊಟ ಸೇವಿಸಲೂ ಆಗದೇ, ಉಸಿರಾಡಲೂ ಆಗದೇ ತೀರ ಸಮಸ್ಯೆಗೆ ಒಗಾಗಿದ್ದಳು.

ನಂತರ ಆಕೆಗೆ ಸರಿಯಾದ ಸಮಾಲೋಚನೆ ಹಾಗೂ ಧೈರ‍್ಯ ಹೇಳುವ ಮೂಲಕ ಡಾ. ವಿವೇಕಾನಂದ ಕೊಲ್ವೆಕರ, ಶಸ್ತ್ರಚಿಕಿತ್ಸಕ ಡಾ. ಅಜಯ ಕಾಳೆ, ಅರವಳಿಕೆ ತಜ್ಞ ಡಾ. ಎಸ್ ಎನ್ ಸುರೇಶ, ಯುವ ವೈದ್ಯ ಡಾ. ಸೌರಭ ಹಿರೇಮಠ ಇವರ ತಂಡದಿಂದ ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸಂಜಯ ಕಂಬಾರ ರೋಗಿಯು ಆಸ್ಪತ್ರೆಗ ಬಂದಾಗ ತುಂಬ ಕ್ಷೀಣ ಸ್ಥಿತಿಯಲ್ಲಿದ್ದರು. ಒಂದು ವೇಳೆ ರೋಗ ಉಲ್ಬಣಗೊಂಡಿದ್ದರೆ ಸಾವು ಕೂಡ ಸಂಭವಿಸಬಹುದಾಗಿತ್ತು. ಅದಲ್ಲದೇ ಇಂತಹ ರೋಗಿಗಳು ತಮ್ಮ ಧ್ವನಿ ಹಾಗೂ ಇನ್ನಿತರೆ ರಕ್ತನಾಳಗಳಲ್ಲಿ ರಕ್ತದ ಸರಿಯಾದ ಪರಿಚಲನೆಯಿಲ್ಲದೇ ಖಾಯಂ ಅಂಗಹೀನತೆಯನ್ನು ಹೊಂದಬಹುದಾಗಿತ್ತು. ಆದರೆ ನಮ್ಮ ವೈದ್ಯರ ಮುತುವರ್ಜಿ, ಕೌಶಲ್ಯ, ನಿಪುಣತೆಗಳ ಕಾರಣದಿಂದ ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಕೆ ಎಲ್ ಇ ಸಂಸ್ಥೆಯ ಕಾಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ವೈದ್ಯರ ತಂಡದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಕಿವಿ, ಗಂಟಲು ಹಾಗೂ ಮೂಗಿನ ವಿಭಾಗದ ಮುಖ್ಯಸ್ಥ ಡಾ. ಆರ್ ಎನ್ ಪಾಟೀಲ ಅವರು, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹನಾಧಿಕಾರಿಗಳಾದ ಪ್ರಶಾಂತ ದೇಸಾಯಿ ಅವರು, ಯು ಎಸ್ ಎಮ್ ಕೆ ಎಲ್ ಇ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ವೈದ್ಯರ ಕಾರ್ಯಕ್ಕೆ ಅಭಿನಂದಿಸಿದ್ದಾರೆ.

Home add -Advt

Related Articles

Back to top button