Kannada NewsKarnataka NewsLatest

*ಪಿಜಿಗೆ ಹೋಗುತ್ತಿದ್ದ ವೈದ್ಯೆಗೆ ಲೈಂಗಿಕ ಕಿರುಕುಳ: ಕಾಮುಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ವೈದ್ಯೆಯೊಬ್ಬಳು ಪಿಜಿ ರೂಮಿಗೆ ಹೋಗುತ್ತಿದ್ದ ವೇಳೆ ಕಾಮುಕನೊಬ್ಬ ಆಕೆಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಚಿಕ್ಕಬಾಣಾವರದ ಎಜಿಬಿ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ವೈದ್ಯೆಯೊಬ್ಬಳು ತನ್ನ ಪಾಡಿಗೆ ತಾನು ಪಿಜಿ ರೂಮಿಗೆ ಹೋಗುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಕಾಮುಕ ಆಕೆಯನ್ನು ಹಿಂಬಾಲಿಸಿದ್ದಾನೆ. ಪಿಜಿ ಗೇಟ್ ತೆಗೆಯುತ್ತಿದ್ದಂತೆ ಬೈಕ್ ನಿಲ್ಲಿಸಿದ ಕಾಮುಕ ಹಿಂದಿನಿಂದ ಬಂದು ವೈದ್ಯಯ ಮೈ-ಕೈ ಮುಟ್ಟಿ ಕಿರುಕುಳ ನೀಡಿದ್ದಾನೆ. ಪಿಜಿ ಸಿಸಿಟಿವಿ ಕ್ಯಾಮಾರದಲ್ಲಿ ಈ ದೃಶ್ಯ ಸೆರೆಯಾಗಿದೆ. ವೈದ್ಯೆ ಜೋರಾಗಿ ಕಿರುಚಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ.

ವೈದ್ಯೆ ಚಿಕ್ಕಬಾಣಾವರ ಠಾನೆಯಲ್ಲಿ ದೂರು ದಾಖಲಿಸಿದ್ದರು. ಸಿಸಿಟಿವಿ ಕ್ಯಾಮರಾ ಆಧರಿಸಿ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಬಂಧಿತನನ್ನು ರಾಕೇಶ್ ಎಂದು ಗುರುತಿಸಲಾಗಿದೆ.

Home add -Advt

Related Articles

Back to top button