*ಬೆಳಗಾವಿ: ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ವಿವಿಧ ಕಂಪನಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತ ಮಾಡುತ್ತಿದ್ದ ಆರೋಪಿಯನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಮೇಜಾನ್ ಕಂಪನಿಯಲ್ಲಿ ಅಧಿಕೃತ ವಿತರಕರಾದ ಪ್ರವೀಣ ಪದ್ಮರಾಜ ಎಂಬುವವರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ೧೪-೦೬-೨೦೨೫ ರಿಂದ ೦೨-೦೮-೨೦೨೫ ರ ನಡುವಿನ ಅವಧಿಯಲ್ಲಿ ಬೆಳಗಾವಿ ಆಟೋನಗರದಲ್ಲಿರುವ ಅಮೇಜಾನ್ ಹಾಗೂ ವಿವಿಧ ಕಂಪನಿಯ ಇನ್ನೀತರ ಎಲೆಕ್ಟ್ರಾನಿಕ್ ವಸ್ತುಗಳ ಕಳ್ಳತನವಾಗಿದೆ ಎಂದು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶುಭಂ ಶಶಿಕಾಂತ ದಿಂಡೆ (೨೯) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಬೆಳಗಾವಿಯ ಶಿವಾಜಿನಗರದ ನಿವಾಸಿ. ಈ ಹಿಂದೆ ಅಮೇಜಾನ್ ಕಂಪನಿಯಲ್ಲಿಯೇ ಕೆಲಸ ಮಾಡುತ್ತಿದ್ದ.
ಬಂಧಿತನಿಂದ ವಿವಿಧ ಕಂಪನಿಯ ೧೮ ಸ್ಮಾರ್ಟ್ ಫೋನ್ ಗಳು, ೧ ಟ್ಯಾಬ್, ೫ ಸ್ಮಾರ್ಟ್ ವಾಚಗಳು, ೧ ಗಿಂಬಲ್ ಮತ್ತು ಏರಪಾಡ್ , ಹೆಡ್ ಫೋನ್ಸ್ ಹೀಗೆ ಒಟ್ಟು-೪,೪೯,೩೨೧/- ರೂ ಮೌಲ್ಯದ ಎಲೆಕ್ಟ್ರಾ ನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.




