Belagavi NewsBelgaum NewsKarnataka NewsLatest

*ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ- ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್‌ಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಮಂಗಳವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಂಘದ ಸದಸ್ಯರ ಸಭೆ ನಡೆಯಿತು.

ಸಭೆಯಲ್ಲಿ ಮುಂದಿನ ಅವಧಿಗೆ ಸಂಘದ ನೂತನ ಅಧ್ಯಕ್ಷರಾಗಿ ನ್ಯೂಸ್ 18 ಕನ್ನಡದ ಹಿರಿಯ ವರದಿಗಾರ ಚಂದ್ರಕಾಂತ ಸುಗಂಧಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಟಿವಿ-5 ಹಿರಿಯ ವರದಿಗಾರ ಶ್ರೀಧರ್ ಕೋಟಾರಗಸ್ತಿ, ಖಜಾಂಚಿಯಾಗಿ ಟಿವಿ-9 ಹಿರಿಯ ವರದಿಗಾರ ಸಹದೇವ ಮಾನೆ, ಸಹಕಾರ್ಯದರ್ಶಿಯಾಗಿ ಸುವರ್ಣನ್ಯೂಸ್ ಹಿರಿಯ ಕ್ಯಾಮರಾಮ್ಯಾನ್ ಅಡಿವೇಶ ಪಾಟೀಲ್ ಅವರನ್ನು ಆಯ್ಕೆ ಮಾಡಲಾಯಿತು. ಇನ್ನುಳಿದಂತೆ ಈ ಹಿಂದಿನ ಪದಾಧಿಕಾರಿಗಳನ್ನು ಮುಂದುವರೆಸಲಾಯಿತು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಪಾಟೀಲ್, ಗೌರವ ಅಧ್ಯಕ್ಷ ಶ್ರೀಕಾಂತ ಕುಬಕಡ್ಡಿ, ಉಪಾಧ್ಯಕ್ಷ ಚಂದ್ರು ಶ್ರೀರಾಮುಡು, ಕಾರ್ಯಕಾರಿಣಿ ಸದಸ್ಯರಾದ ಸಂತೋಷ ಶ್ರೀರಾಮುಡು, ಅಜೀತ್ ಸಣ್ಣಕ್ಕಿ, ಮಂಜುನಾಥ ರೆಡ್ಡಿ, ಅನಿಲ್ ಕಾಜಗಾರ, ಸಿದ್ದೇಶ್ ಪುಠಾಣಿ, ಮೈಲಾರಿ ಪಟಾತ, ಸಿದ್ದನಗೌಡ ಪಾಟೀಲ್,‌‌ ಮಂಜುನಾಥ ಹುಡೇದ್, ರಾಜೇಶ ಹೂಗಾರ್, ಸುನೀಲ್ ಗಾವಡೆ, ರೋಹಿತ ಶಿಂಧೆ, ಪ್ರವೀಣ ಶಿಂಧೆ, ರವಿ ಭೋವಿ, ವಿಶ್ವನಾಥ ಪಾಟೀಲ, ಪ್ರತಾಪ ಚವಡಿಕರ್, ಅಶೋಕ ಕಬಾಡಗಿ, ಮಹಾಂತೇಶ ಹಡಪದ, ಶಿವು ಹುಲ್ಲೊಳಿ ಸೇರಿ ಮತ್ತಿತರರು ಇದ್ದರು.

Home add -Advt

Related Articles

Back to top button