Belagavi NewsBelgaum NewsCrimeKannada NewsKarnataka News
*ಬೆಳಗಾವಿಯಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಕಾಂಗ್ರೆಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮುತ್ತಯ್ಯಾ ಶಂಕರಯ್ಯ ಯರಗುಪ್ಪಿಮಠ (30) ಸಾವನ್ನಪ್ಪಿದ ಯುವಕ. ನಗರ ಮೂರನೇ ರೈಲ್ವೆ ಗೇಟ್ ನಿಂದ ಫಸ್ಟ್ ರೈಲ್ವೆ ಗೇಟ್ ಮಾರ್ಗವಾಗಿ ಸಂಚರಿಸುವಾಗ ಟ್ರಕ್ ಚಾಲಕನ ನಿರ್ಲಕ್ಷ್ಯದಿಂದ ಬೈಕ್ ಸವಾರ ಸ್ಥಳದಲ್ಲೇ ಸಾವುವನ್ನಪ್ಪಿದ್ದಾನೆ.
ಹಿರಿಯ ನಾಗರಿಕರ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದ ಮುತ್ತಯ್ಯ ಸಾವನ್ನಪ್ಪಿದ್ದು, ಯುವಕನ ಮೃತದೇಹವನ್ನ ಪೊಲೀಸರು ಬಿಮ್ಸ್ ಶವಾಗಾರಕ್ಕೆ ರವಾನಿಸಿದ್ದಾರೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.



