ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 11 ನೇ ಶತಮಾನದಲ್ಲಿ ಜಗದ್ಗುರು ಬಸವೇಶ್ವರರ ಜೊತೆ ಕಲ್ಯಾಣ ಕ್ರಾಂತಿ ಮಾಡಿದ್ದರೆನ್ನುವ ನಂಬಿಕೆಯ ರುದ್ರಸ್ವಾಮಿಯವರ ಬೆಳ್ಳಿ ಮೂರ್ತಿಯನ್ನು ಬೆಳಗಾವಿಯ ಪ್ರಸಿದ್ಧ ಪೋತದಾರ ಜ್ಯುವೆಲರ್ಸ್ ತಯಾರಿಸಿದೆ.
ಮಲಪ್ರಭಾ ದಂಡೆಯ ಮೂಲಕ ಬೆಳಗಾವಿಗೆ ಬಂದು, ಹುಣಶಿಕಟ್ಟಿಯಲ್ಲಿ ಮಠ ನಿರ್ಮಾಣ ಮಾಡಿದ, ನಂತರ ಉಳವಿ ಮೂಲಕ ನಿರ್ಗಮಿಸಿ ಜೀವಂತ ಸಮಾದಿಯಾದರು ಎನ್ನುವ ನಂಬಿಕೆ ರುದ್ರಸ್ವಾಮಿ ಅವರ ಬಗೆಗಿದೆ.
ಈ ಮಹಾನ್ ವ್ಯಕ್ತಿಯ ಬೆಳ್ಳಿಯ ಮೂರ್ತಿಯನ್ನು 52 ಕಿಲೋ ತೂಕದ ಬೆಳ್ಳಿಯಲ್ಲಿ ತಯಾರಿಸಲಾಗಿದೆ. ಇದರ ಮೌಲ್ಯ 20 ಲಕ್ಷ ರೂ. ಪೋತದಾರ್ ಜ್ಯುವೆಲರ್ಸ್ ನ ಗಿರೀಶ್ ಕಾಗಲಕರ್ ತಂಡ ಮೂರ್ತಿ ತಯಾರಿಸಿದೆ. ಮೂರ್ತಿ ತಯಾರಿಸಲು ತಗುಲಿದ್ದು 90 ದಿನ. ರಾಜು ಪೋತದಾರ್ ಮತ್ತು ಸಂಜಯ ಪೋತದಾರ್ ಇದರ ಉಸ್ತುವಾರಿ ನೋಡಿಕೊಂಡರು.
ಇಂತಹ ಮಹಾನ್ ಪುರುಷರ ಮೂರ್ತಿ ತಯಾರಿಸಲು ಅವಕಾಶ ಸಿಕ್ಕಿದ್ದು ನಮ್ಮ ಕುಟುಂಬ ಮತ್ತು ಜ್ಯುವೆಲರ್ಸ್ ಸೌಭಾಗ್ಯ ಎನ್ನುತ್ತಾರೆ ಅನಿಲ ಪೋತದಾರ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ