
ಪ್ರಗತಿವಾಹಿನಿ ಸುದ್ದಿ: ಪ್ರಯಾಣಿಕರ ರೈಲು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ 22 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಥೈಲ್ಯಾಂಡ್ ನಲ್ಲಿ ಈ ದುರಂತ ಸಂಭವಿಸಿದೆ. ರೈಲು ಬ್ಯಾಂಕಾಕ್ ನಿಂದ ದೇಶದ ಈಶಾನ್ಯ ಪ್ರಾಂತಕ್ಕೆ ಪ್ರಯಾಣಿಸುತ್ತಿತ್ತು. ರೈಲಿನ ಒಂದು ಬೋಗಿಯ ಮೇಲೆ ಕ್ರೇನ್ ಬಿದ್ದ ಪರಿಣಾಮ ರೈಲಿನ ಬೋಗಿಗಳು ಹಳಿ ತಪ್ಪಿ ಈ ದುರಂತ ಸಂಭವಿಸಿದೆ.
ನಖೋನ್ ರಾಟ್ಟಸಿಮಾ ಪ್ರಾಂತ್ಯದ ಸಿಖಿಯೋ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ಹೈಸ್ಪೀಡ್ ರೈಲು ನಿರ್ಮಾಣ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ರೇನ್ ರೈಲು ಬೋಗಿಗಳ ಮೇಲೆ ಬಿದ್ದು ರೈಲು ಹಳಿ ತಪ್ಪಿದ್ದು, ಸ್ಥಳದಲ್ಲೇ 22 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.




