
ಪ್ರಗತಿವಾಹಿನಿ ಸುದ್ದಿ: ತಾಯಿಯನ್ನು ಹೊಡೆದಿದ್ದಕ್ಕೆ ಮಾ ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾರನಗೆರೆಯಲ್ಲಿ ಈ ಘಟನೆ ನಡೆದಿದೆ. ೪೫ ವರ್ಷದ ನಿತಿನ್ ತುಳಸಿರಾಮ್ ಕೊಲೆಯಾದ ಮಲತಂದೆ. ಹರೀಶ್ ಕೊಲೆ ಆರೋಪಿ. ಹತ್ತು ವರ್ಷಗಳ ಹಿಂದೆ ಹರೀಶ್ ತಾಯಿ ಯಶೋಧಾಗೆ ಪತಿ ಸಾವನ್ನಪ್ಪಿದ್ದರು. ಮೂರು ವರ್ಷಗಳ ಹಿಂದೆ ಯಶೋಧಾ ನಿತಿನ್ ತುಳಸಿರಾಮ್ ಎಂಬಾತನನ್ನು ಎರಡನೇ ವಿವಾಹವಾಗಿದ್ದರು. ಯಶೋಧಾ ಮಗ ಹರೀಶ್ ಹಾಗೂ ಮಲತಂದೆ ನಿತಿನ್ ತುಳಸಿರಾಮ್ ಗೆ ನಡುವೆ ಆಗಾಗ ಜಗಳವಾಗುತ್ತಿತ್ತು.
ರೇಷನ್ ವಿಚಾರವಾಗಿ ಹರೀಶ್ ನಿನ್ನೆ ತಾಯಿ ಜೊತೆ ಜಗಳವಾಡಿದ್ದ. ಇದೇ ವಿಚಾರವಾಗಿ ಎರಡನೇ ಪತಿ ನಿತಿನ್ ತುಳಸಿರಾಮ್ ಪತ್ನಿ ಯಶೋಧಾಗೆ ಹೊಡೆದಿದ್ದ. ತಾಯಿ ಮೇಲೆ ಕೈ ಮಾಡಿದ್ದಕ್ಕೆ ಕೋಪಗೊಂಡ ಮಗ ಹರೀಶ್, ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ತುರವೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಲ್ಹಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.




