*ಬೆಳಗಾವಿಯಲ್ಲಿ ಸಂಚಾರಿ ಧರ್ಮ ಜಾಗೃತಿ ಯಾತ್ರೆ: ಶ್ರೀಶೈಲ ಶ್ರೀ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಕ್ಷಿಣ ಕಾಶಿ ಎಂದು ಪ್ರಖ್ಯಾತಿ ಪಡೆದಿರುವ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮಹಾಕುಂಭಾಭಿಷೇಕ, ಲಕ್ಷ ದೀಪೋತ್ಸವ, ಕೃಷ್ಣಾರತಿ, ಪುರಂವತರ ಮಹಾಮೇಳ, ಭದ್ರಕಾಳಿ ವೀರಭದ್ರೇಶ್ವರರ ಕಲ್ಯಾಣ ಮಹೋತ್ಸವ ಹಾಗೂ ಶ್ರೀಶೈಲ ಜಗದ್ಗುರುಗಳ ‘ಸಂಚಾರಿ ಧರ್ಮ ಜಾಗೃತಿ ಯಾತ್ರೆ’ ಜ. 20 ರಂದು ಗಾಂಧಿ ಭವನದಲ್ಲಿ ಜರುಗಲಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಜಗದ್ಗುರುಗಳು ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭಕ್ತರ ಕಾಮಧೇನುವಾದ ಯಡೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಮೂಲಾಗ್ರ ಜೀರ್ಣೋದ್ಧಾರವಾಗಿ ಉತ್ತರ ಮತ್ತು ದಕ್ಷಿಣದ ದಿವ್ಯ ಗೋಪುರ ಮಾಡಲಾಗಿದೆ. ಇದೇ ಜ.20 ರಂದು ನಡೆಯುವ ಸಂಚಾರಿ ಧರ್ಮ ಯಾತ್ರೆಗೆ ಸಾನಿದ್ಯವನ್ನು ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ವಹಿಸಲಿದ್ದಾರೆ.
ಕಟಕೋಳ ಚಂದರಗಿಯ ಹಿರೇಮಠದ ಶ್ರೀ ವೀರಭದ್ರೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು, ಭೂತರಾಮನಹಟ್ಟಿಯ ಮುಕ್ತಿಮಠದ ಶ್ರೀ ಶಿವಸಿದ್ದ ಸೋಮೇಶ್ವರ ವಹಿಸಲಿದ್ದಾರೆ.
ನೇತೃತ್ತವನ್ನು ಕಟಕೋಳ ಚಂದರಗಿ ಹಿರೇಮಠದ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಬೆಳಗಾವಿ ಶಿವಾಚಾರ್ಯ ಸ್ವಾಮಿಗಳು, ಬೆಳಗಾವಿ ಕಾರಂಜಿಮಠದ ಗುರುಸಿದ್ದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಈ ಕಾರ್ಯಕ್ರಮದ ಮಾರ್ಗದರ್ಶಕರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ, ನೂಲ, ದೊಡ್ಡವಾಡ, ಗೋಕಾಕ, ಹೂಲಿ, ಪಾಶ್ಚಾಪೂರ, ಸಂಗೋಳ್ಳಿ, ಕೊಣ್ಣೂರ, ಸತ್ತಿಗೇರಿ, ಸುತಗಟ್ಟಿ, ಕಿಲ್ಲಾತೋರಗಲ್, ಉ.ಖಾನಾಪೂರ, ಚಿಪ್ಪಲಕಟ್ಟಿ, ಹಿರೇಮುನವಳ್ಳಿ, ಬನ್ನೂರ, ಕಬ್ಬರ, ಕೆ.ಶಿವಾಪೂರ, ಹರ್ಲಾಪೂರ, ಬಾಗೋಜಿಕೊಪ್ಪ, ಸಂಬಯ್ಯನ ಮಠ ಹೂಲಿ, ಮುಳ್ಳೂರ, ಮಮದಾಪೂರ, ಸಂಪಗಾಂವ, ಹೊಸ ಯರಗುದ್ದಿ ಸೇರಿದಂತೆ ಸಮಸ್ತ ಮಠಾಧೀಶರು ಸಮ್ಮುಖ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎ.ಬಿ ಪಾಟೀಲರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ, ಜಗದೀಶ ಶೆಟ್ಟರ, ಪ್ರಭಾಕರ ಕೋರೆ, ಗಣೇಶ ಹುಕ್ಕೇರಿ, ಶಶಿಕಲಾ ಜೊಲ್ಲೆ, ಮಹಾಂತೇಶ ಕವಟಗಿಮತ, ಮಂಗಲಾ ಅಂಗಡಿ ಮೊದಲಾದ ಹಾಲಿ ಮಾಜಿ ಸಂಸದರು ಮತ್ತು ಶಾಸಕರು ಆಗಮಿಸಲಿದ್ದಾರೆ ಎಂದರು.

ಜ.21 ರಂದು ಮುಂಜಾನೆ 10ಕ್ಕೆ ಶ್ರೀ ಭದ್ರಕಾಳಿ ವೀರಭದ್ರೇಶ್ವರ ಸಾಮೂಹಿಕ ತುಲಾಭಾರ ಹಾಗೂ ಸಾಮೂಹಿಕ ಲಿಂಗದೀಕ್ಷಾ ಕಾರ್ಯಕ್ರಮ ಜರುಗಲಿದ್ದು, ಪಾವನ ಸಾನಿಧ್ಯವನ್ನು ಶ್ರೀಶೈಲ ಜಗದ್ಗುರುಗಳವರು ವಹಿಸಲಿದ್ದಾರೆ. ನೇತೃತ್ವವನ್ನು -ಶಹಾಪೂರ ಹಿರೇಮಠದ ಶ್ರೀ ಸೂಗುರೇಶ್ವರ ಶಿವಾಚಾರ್ಯ ಸ್ವಾಮಿಗಳು, ನೀಲಗಲ್ ಸಂಸ್ಥಾನ ಬೃಹನ್ಮಠದ ಶ್ರೀ. ರೇಣುಕ ಶಾಂತಮಲ್ಲ ಅವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಸಿಂದಗಿ, ಜೈನಾಪೂರ, ಬನಹಟ್ಟಿ, ಮಾಂಜರಿ, ಜಮಖಂಡಿ, ಕಪರಟ್ಟಿ-ಕಳ್ಳಿಗುದ್ದಿ, ಮಾಗಣಸೂರ-ರೇವೂರ, ಜಮಖಂಡಿ, ಅಂಬಿಕಾನಗರ, ಬೆಳ್ಳಂಕ್ಕಿ, ಘೋಡಗೇರಿ, ಬೈಲಹೊಂಗಲ, ಬೆಂಗಳೂರು, ಕ್ಯಾರಗುಡ್ಡದ ಶ್ರೀಗಳು ಹಾಗೂ ಲಕಲ್ಲ ಶಾಸ್ತ್ರೀಗಳು ವಹಿಸಲಿದ್ದಾರೆ ಎಂದರು.
ಜ.21 ರಂದು ಮುಂಜಾನೆ 10ಕ್ಕೆ ಶ್ರೀ ಭದ್ರಕಾಳಿ ವೀರಭದ್ರೇಶ್ವರ ಸಾಮೂಹಿಕ ತುಲಾಭಾರ ಹಾಗೂ ಸಾಮೂಹಿಕ ಲಿಂಗದೀಕ್ಷಾ ಕಾರ್ಯಕ್ರಮ ಜರುಗಲಿದ್ದು ಶ್ರೀಶೈಲ ಜಗದ್ಗುರುಗಳವರು ವಹಿಸಲಿದ್ದಾರೆ. ನೇತೃತ್ವವನ್ನು ಶಹಾಪೂರ ಹಿರೇಮಠದ ಶ್ರೀ ಸೂಗುರೇಶ್ವರ ಶಿವಾಚಾರ್ಯ ಸ್ವಾಮಿಗಳು, ನೀಲಗಲ್ ಸಂಸ್ಥಾನ ಬೃಹನ್ಮಠದ ಶ್ರೀ ರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಸಮ್ಮುಖವನ್ನು ಒಂದಗಿ, ಜೈನಾಪೂರ, ಬನಹಟ್ಟಿ, ಮಾಂಜರಿ, ಜಮಖಂಡಿ, ಕಪರಟ್ಟಿ-ಕಳ್ಳಿಗುದ್ದಿ, ನಾಗಣಸೂರ-ರೇವೂರ, ಜಮಖಂಡಿ, ಅಂಬಿಕಾನಗರ, ಬೆಳ್ಳಂಕ್ಕಿ, ಘೋಡಗೇರಿ, ಬೈಲಹೊಂಗಲ, ಬೆಂಗಳೂರು, ಕ್ಯಾರಗುಡ್ಡದ ಶ್ರೀಗಳು ಹಾಗೂ ಇಲಕಲ್ಲ ಶಾಸ್ತ್ರೀಗಳು ವಹಿಸಲಿದ್ದಾರೆ ಎಂದರು.
ಬೆಳಗಾವಿ ಜಿಲ್ಲಾದ್ಯಂತ ಸಂಚಾರಿ ಧರ್ಮ ಜಾಗೃತಿ ಯಾತ್ರೆಯು ನಡೆಯಲಿದ್ದು, ವಿವಿಧ ತಾಲೂಕು, ಗ್ರಾಮ, ನಗರಗಳನ್ನು ಧರ್ಮ ಜಾಗೃತಿ ಯಾತ್ರೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರತಿ ಊರುಗಳಲ್ಲಿ 5 ದಿನಗಳ ಕಾರ್ಯಕ್ರಮ ನಡೆಯಲಿದೆ. ಮೊದಲ ಮೂರು ದಿನ ನುರಿತ ಮಠಾಧೀಶರು, ಶಾಸ್ತ್ರೀಗಳು ಪ್ರತಿದಿನ ಸಂಜೆ ಪ್ರವಚನ ನೀಡುವುದರ ಜೊತೆಗೆ ಊರಿನ ಎಲ್ಲ ಭಕ್ತರ ಮನೆಗೆ ಭೇಟಿಕೊಟ್ಟು ಕುಟುಂಬದ ಸರ್ವಸದಸ್ಯರೂ ಲಿಂಗದೀಕ್ಷೆಯನ್ನು ಪಡೆದುಕೊಂಡು ಧರ್ಮ ಮಾರ್ಗದಲ್ಲಿ ಸಾಗುವಂತೆ ಪ್ರೇರಣೆ ನೀಡಲಿದ್ದಾರೆ ಎಂದರು.
4 ನೇ ದಿನ ಸಂಜೆ ಹಾಗೂ 5 ನೇ ದಿನ ಮುಂಜಾನೆ ಶ್ರೀ ಶ್ರೀಶೈಲ ಜಗದ್ಗುರುಗಳು ಆ ಊರಿಗೆ ಆಗಮಿಸಿ ಧರ್ಮಜಾಗೃತಿ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು. ಜೊತೆಗೆ ಉಚಿತ ಸಾಮೂಹಿಕ ಲಿಂಗದೀಕ್ಷೆ ಮತ್ತು ಭದ್ರಕಾಳಿ ವೀರಭದ್ರೇಶ್ವರ ತುಲಾಭಾರ ಕಾರ್ಯಕ್ರಮ ನೇರವೇರಿಸಿ ಮಾರ್ಚ್ ಮೊದಲ ವಾರ ಶ್ರೀ ಕ್ಷೇತ್ರ ಯಡೂರದಲ್ಲಿ ನಡೆಯುವ ರಾಜಗೋಪುರಗಳ ಲೋಕಾರ್ಪಣೆ, ಮಹಾಕುಂಭಾಭೀಷೇಕ, ಲಕ್ಷದೀಪೋತ್ಸವ, ಕೃಷ್ಣಾರತಿ ಮತ್ತು ಪುರವಂತರ ಮಹಾಮೇಳ ನಡೆಯಲಿದೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನೂಲ ಸುರಗಿರೇಶ್ವರಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವರಾಜ ಬಾತೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



