Belagavi NewsBelgaum NewsCrimeKannada NewsKarnataka NewsNational
*ಕಾರ್ ಹಾಗೂ ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಸೊಪ್ಪಡ್ಲ ಗ್ರಾಮದ ಬೆಳಗಾವಿ- ಬಾಗಲಕೋಟೆ ರಸ್ತೆಯಲ್ಲಿ ಕಾರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಸಾವನ್ನಪ್ಪಿದ್ದಾನೆ.
25 ವರ್ಷದ ದಿವ್ಯ ಎಂಬ ಯುವತಿ ಹುಂಡೈ ಐ-20 ಕಾರನ್ನು ವೇಗವಾಗಿ ಓಡಿಸಿ ಬೈಕ್ ಗೆ ಗುದ್ದಿದ್ದು, ಲಕ್ಕಣ್ಣ ಬಸಪ್ಪ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಅಪಘಾತದ ವೇಳೆ ವ್ಯಕ್ತಿಯ ತಲೆಗೆ, ಎದೆಗೆ, ಕೈಕಾಲುಗಳಿಗೆ ಗಾಯವಾಗಿ ವ್ಯಕ್ತಿ ಮೃತಪಟ್ಟಿದ್ದಾನೆ. ಜೊತೆಗೆ ಯುವತಿ ಓಡಿಸುತ್ತಿದ್ದ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ದಿಲೀಪ ರಾಜಪಾಲಾನಿ, ಸದಾಶಿವ ಮಲಕಪ್ಪ ದೇಶೆಟ್ಟಿ ಎಂಬುವರಿಗೆ ಗಂಭಿರಗಾಯಗಳಾಗಿವೆ.
ಈ ಬಗ್ಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಮುರಗೋಡ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

