*ಆಂಜನೇಯ ದೇವಸ್ಥಾನದಲ್ಲಿ ನಿಗೂಢ ಗೆಜ್ಜೆ ಶಬ್ಧ: ದೇವಸ್ಥಾನದ ಬಳಿ ಜಮಾವಣೆಗೊಂಡ ಗ್ರಾಮಸ್ಥರು*

ಪ್ರಗತಿವಾಹಿನಿ ಸುದ್ದಿ: ಆಂಜನೇಯ ದೇವಸ್ಥಾನದಲ್ಲಿ ನಿಗೂಢ ಗೆಜ್ಜೆ ಶಬ್ಧವೊಂದು ಕೇಳಿಬರುತ್ತಿರುವ ಘಟನೆ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ದೇವಸ್ಥಾನದ ಒಳ ಭಾಗದಿಂದ ನಿರಂತರವಾಗಿ ಗೆಜ್ಜೆ ಶಬ್ಧ ಕೇಳಿಬರುತ್ತಿದೆ. ಗೆಜ್ಜೆ ಶಬ್ಧ ಕೇಳಿ ಗ್ರಾಮಸ್ಥರು ದೇವಾಲಯದ ಬಳಿ ಜಮಾವಣೆಗೊಂಡಿದ್ದಾರೆ.
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಒಂದೆಡೆ ನಿಧಿ, ಪುರಾತನ ವಸ್ತುಗಳು ಪತ್ತೆಯಾಗುತ್ತಿರುವ ಬೆನ್ನಲ್ಲೇ ಮತ್ತೊಂದೆಡೆ ಜಿಲ್ಲೆಯ ಆಂಜನೇಯ ದೇಗುಲವೊಂದರಲ್ಲಿ ನಿಗೂಢ ಗೆಜ್ಜೆ ನಾದ ಕೇಳಿಬರುತ್ತಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೂರ್ಲಹಳ್ಳಿಯ ಆಂಜನೇಯ ದೇವಸ್ಥಾನದಲ್ಲಿ ಗೆಜ್ಜೆ ಶಬ್ಧ ಕೇಳಿಬರುತ್ತಿದೆ. ಕಳೆದ ಮೂರ್ನಾಕು ದಿನಗಳಿಂದ ದೇವಸ್ಥಾನದ ಒಳಗಿನಿಂದ ಗೆಜ್ಜೆ ಶಬ್ಧ ಕೇಳಿಬರುತ್ತಿದ್ದು, ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.
ಈ ಬಗ್ಗೆ ಪೊಲೀಸರು ಹಾಗೂ ಅಧಿಕಾರಿಗಳಿಗೂ ಮಾಹಿತಿ ನಿಡಿದ್ದಾರೆ. ದೇವಸ್ಥಾದಬಳಿ ಜಮಾವಣೆಗೊಂಡಿರುವ ಸಾವಿರಾರು ಗ್ರಾಮಸ್ಥರು ಕಳೆದ ಮೂರು ದಿನಗಳಿಂದ ದೇವಾಲಯದ ಬಳಿ ಜಾಗರಣೆ ಮಾಡುತ್ತಿದ್ದಾರೆ. ಆದರೆ ಯಾರೊಬ್ಬರೂ ದೇವಸ್ಥಾನದ ಒಳಗೆ ಹೋಗಿ ನೋಡುತ್ತಿಲ್ಲ. ದೇವಾಲಯದ ಬಳಿ ನೆರೆದಿರುವ ಗ್ರಾಮಸ್ಥರು ಹೇಳುವ ಪ್ರಕಾರ, ಮೂರ್ನಾಲ್ಕು ದಿನಗಳಿಂದ ಈ ದೇವಸ್ಥಾನದ ಒಳಗಿನಿಂದ ಗೆಜ್ಜೆ ಶಬ್ಧ ನಿರಂತರವಾಗಿ ಕೇಳುತ್ತಿದೆ. ಒಂದು ರೀತಿಯ ಆತಂಕವೂ ಆಗುತ್ತಿದೆ. ಈ ದೇವಸ್ಥಾನದ ಬಳಿಯೇ ದುರ್ಗಮ್ಮ ಹಾಗೂ ಮಾಯಮ್ಮ ದೇವಿ ದೇವಸ್ಥಾನಗಳನ್ನು ನಿರ್ಮಿಸಲಾಗಿತ್ತಿದೆ. ಈಗ ನಿರಂತರ ಗೆಜ್ಜೆ ಶಬ್ಧ ಕೇಳಿಬರುತ್ತಿದ್ದು, ಆಂಜನೇಯ ದೇವಸ್ಥಾನದ ಒಳಗಿನಿಂದ ಕೇಳಿಬರುತ್ತಿದೆ. ಆದರೆ ಯಾರೊಬ್ಬರಿಗೂ ದೇವಸ್ಥಾದ ಒಳಹೋಗಿ ನೋಡಲು ಧೈರ್ಯ ಸಾಲುತ್ತಿಲ್ಲ ಎಂದಿದ್ದಾರೆ. ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ಮೂರು ದಿನಗಳಿಂದ ಗ್ರಾಮಸ್ಥರು ರಾತ್ರಿಹಗಲು ದೇವಾಲಯದ ಬಳಿ ಜಾಗರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

